ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಮಾನವೀಯತೆ ಮರೆತ ಮಾತೃಹೃದಯವೇ? ಬೀದಿ ನಾಯಿಗಳ ಪಾಲಾದ ಹಸುಗೂಸು!

ಅಥಣಿ : ಹೆತ್ತ ಕರುಳಿನ ಕುಡಿಯನ್ನು ಬೀದಿಪಾಲು ಮಾಡಿದ ಅಮಾನವೀಯ ಘಟನೆ ಅಥಣಿ ಪಟ್ಟಣದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ನವಜಾತ ಶಿಶುವೊಂದನ್ನು ಕಾಗವಾಡ ರಸ್ತೆಯ ಪಕ್ಕದಲ್ಲಿ ಎಸೆದು ಹೋಗಿದ್ದು, ಬೀದಿ ನಾಯಿಗಳು ಮಗುವಿನ ದೇಹವನ್ನು ಎಳೆದಾಡುತ್ತಿದ್ದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಅಥಣಿ ಪಟ್ಟಣದ ಕಾಗವಾಡ ರಸ್ತೆಯ ಪಕ್ಕದಲ್ಲಿ ಬೀದಿ ನಾಯಿಗಳು ಯಾವುದೋ ವಸ್ತುವನ್ನು ಎಳೆದಾಡಿ ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದ್ದಾರೆ. ಈ ವೇಳೆ ಮಗುವಿನ ತಲೆ ಹಾಗೂ ಒಂದು ಕಾಲು ಕಾಣಿಸಿಕೊಂಡಿದ್ದು, ಇದು ನವಜಾತ ಶಿಶುವಿನ ದೇಹವೆಂಬುದು ತಿಳಿದುಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅಥಣಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಕಪ್ಪ ಅಗ್ನಿ ಅವರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಗುವನ್ನು ಯಾರು, ಯಾವ ಕಾರಣಕ್ಕಾಗಿ ಇಲ್ಲಿ ಬಿಸಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಹೆತ್ತ ಕರುಳಿನ ಕಂದಮ್ಮಕ್ಕೆ ಬದುಕುವ ಅವಕಾಶವನ್ನೇ ನೀಡದೆ ಬೀದಿ ನಾಯಿಗಳ ಪಾಲು ಮಾಡಿದವರು ಯಾರು? ತಾಯ್ತನದ ಮಮತೆಯನ್ನೇ ಪ್ರಶ್ನಿಸುವ ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Edited By :
PublicNext

PublicNext

02/11/2026 07:37 am

Cinque Terre

6.65 K

Cinque Terre

0

ಸಂಬಂಧಿತ ಸುದ್ದಿ