ಚಿಕ್ಕೋಡಿ:ಗಡಿಗಳು ಬೇರೆಯಾದರೂ ಕನ್ನಡದ ಮೇಲಿನ ಅಭಿಮಾನ ಒಂದೇ; ಮಹಾರಾಷ್ಟ್ರದ ನೆಲದಲ್ಲಿ ಮೊಳಗಿದ ಕನ್ನಡದ ಜಯಘೋಷ!
ಕನ್ನಡ ಭಾಷೆ, ನೆಲ, ಜಲದ ಮೇಲಿನ ಅಭಿಮಾನಕ್ಕೆ ಗಡಿಗಳ ಹಂಗಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಜತ್ ತಾಲೂಕಿನ ಸಿಂಧೂರ ಗ್ರಾಮದಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವವೇ ಸಾಕ್ಷಿಯಾಯಿತು.
ಮಹಾರಾಷ್ಟ್ರದ ನೆಲದಲ್ಲಿದ್ದರೂ ಕನ್ನಡದ ಮೇಲಿನ ಪ್ರೀತಿ, ಅಭಿಮಾನವನ್ನು ಎದೆಯಲ್ಲಿಟ್ಟುಕೊಂಡಿರುವ ಗಡಿನಾಡ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಶೂರ ಸಿಂಧೂರ ಲಕ್ಷ್ಮಣ ಮಹಿಳಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿ ಕನ್ನಡದ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.
ಕನ್ನಡದ ಬಾವುಟ, ಕನ್ನಡದ ಘೋಷಣೆಗಳು ಹಾಗೂ ನಾಡುನುಡಿಯ ಮೇಲಿನ ಅಭಿಮಾನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಕನ್ನಡಿಗರು ಒಗ್ಗಟ್ಟಾಗಿ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭಾಷಾ ಪ್ರೇಮವನ್ನು ಮೆರೆದರು.
ರಾಜ್ಯಗಳು ಬೇರೆ, ಆಡಳಿತಗಳು ಬೇರೆ ಇರಬಹುದು. ಆದರೆ ಕನ್ನಡಿಗರ ಹೃದಯದಲ್ಲಿ ಕನ್ನಡದ ಸ್ಥಾನ ಮಾತ್ರ ಎಂದಿಗೂ ಅಚಲ ಎಂಬ ಸಂದೇಶವನ್ನು ಸಿಂಧೂರ ಗ್ರಾಮದ ಕನ್ನಡಿಗರು ಸಾರಿದರು. ಗಡಿ ದಾಟಿದ ಕನ್ನಡದ ಕಂಪು ಮಹಾರಾಷ್ಟ್ರದ ನೆಲದಲ್ಲೂ ಪಸರಿಸುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಹೊಸ ಮೆರುಗು ತಂದಿತು.
ಕನ್ನಡ ಎಲ್ಲಿದ್ದರೂ ಕನ್ನಡಿಗರ ಹಬ್ಬ ಒಂದೇ ಎಂಬುದನ್ನು ಸಿಂಧೂರ ಗ್ರಾಮ ಮತ್ತೊಮ್ಮೆ ಸಾಬೀತುಪಡಿಸಿದೆ!
Kshetra Samachara
02/11/2026 08:54 pm
LOADING...