ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಶ್ರೀ ರಾಮ ಸೇವಾ ಮಂದಿರದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ₹1.50 ಲಕ್ಷ ನೆರವು

ಬೆಳಗಾವಿ : ನಿಪ್ಪಾಣಿ ತಾಲೂಕಿನ ಕುರ್ಲಿ ವಲಯದ ಕೋಗನೋಳ್ಳಿ ಗ್ರಾಮದ ಶ್ರೀ ರಾಮ ಸೇವಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ₹1.50 ಲಕ್ಷ ಸಹಾಯಧನ ಮಂಜೂರಾಗಿದೆ.

ಮಂಜೂರಾದ ಸಹಾಯಧನದ ಡಿಡಿಯನ್ನು ಚಿಕ್ಕೋಡಿ ಜಿಲ್ಲಾ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರಾದ ಉಮೇಶ್ ಪಾಟೀಲ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಂಕಜ್ ಪಾಟೀಲ್, ನಿಪ್ಪಾಣಿ ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ಎಚ್., ನಿಪ್ಪಾಣಿ ತಾಲೂಕಿನ ಎರಡನೇ ಯೋಜನಾಧಿಕಾರಿ ಮಂಜು ನಾಯ್ಕ್, ವಲಯದ ಮೇಲ್ವಿಚಾರಕರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Edited By :
PublicNext

PublicNext

01/11/2026 03:03 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ