ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಾಜ್ಯೋತ್ಸವ ಸಂಭ್ರಮ; ಲಕ್ಷಾಂತರ ಕನ್ನಡಿಗರ ಸಂಗಮ

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಭಾನುವಾರ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕನ್ನಡಾಭಿಮಾನಿಗಳ ಅಭೂತಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ಸಾರಲು ಲಕ್ಷಾಂತರ ಕನ್ನಡಾಭಿಮಾನಿಗಳು ನಗರದ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಒಂದಾಗಿ ರಾಜ್ಯೋತ್ಸವದ ವೈಭವವನ್ನು ಇಮ್ಮಡಿಗೊಳಿಸಿದರು.

ಶನಿವಾರ ಸಂಜೆಯಿಂದಲೇ ಆರಂಭಗೊಂಡಿದ್ದ ರಾಜ್ಯೋತ್ಸವದ ಸಂಭ್ರಮ ಭಾನುವಾರ ಇಡೀ ದಿನ ಮುಂದುವರಿಯಿತು. ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಯುವಜನರು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಕನ್ನಡದ ಹಳದಿ-ಕೆಂಪು ಬಾವುಟಗಳನ್ನು ಹಿಡಿದು, ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಸಾಗಿದ ಜನರ ಉತ್ಸಾಹ ಎಲ್ಲರ ಗಮನ ಸೆಳೆಯಿತು.

ನಗರದ ವಿವಿಧ ಬಡಾವಣೆಗಳು ಹಾಗೂ ಗಲ್ಲಿಗಳಿಂದ ಆಗಮಿಸಿದ ಆಕರ್ಷಕ ರೂಪಕ ವಾಹನಗಳು ರಾಜ್ಯೋತ್ಸವದ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ರೂಪಕ ವಾಹನಗಳ ಮುಂದೆ ವಿವಿಧ ನಾಮಫಲಕಗಳನ್ನು ಹಿಡಿದ ಯುವಜನರು ಕನ್ನಡ ಹಾಡುಗಳ ತಾಳಕ್ಕೆ ಕುಣಿದು ಸಂಭ್ರಮಿಸಿದರು.

Edited By : Vinayak Patil
PublicNext

PublicNext

01/11/2026 10:15 pm

Cinque Terre

5.28 K

Cinque Terre

0

ಸಂಬಂಧಿತ ಸುದ್ದಿ