ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಲಾವಿದೆ ಡಾ.ಭಾರತಿ ಮರವಂತೆಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಆಯ್ಕೆ

ಉಡುಪಿ: ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕರಾಗಿ ಡಾ. ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ. ಈ ನೇಮಕದೊಂದಿಗೆ ಕರಾವಳಿ ಜಿಲ್ಲೆಗಳ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ, ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ವಹಿಸಲಾಗಿದೆ.

ಡಾ. ಭಾರತಿ ಮರವಂತೆ ರಂಗೋಲಿಯಲ್ಲಿ ಸಂಶೋಧನೆ, ಜಾನಪದ ಕಲೆ-ಸಾಹಿತ್ಯದಲ್ಲಿ 15ಕ್ಕೂ ಹೆಚ್ಚು ಕೃತಿಗಳು, 100ಕ್ಕೂ ಹೆಚ್ಚು ಲೇಖನಗಳು, ಕಿರುಯೋಜನೆಗಳು, ಕನ್ನಡ ಜಾನಪದ ನಿಘಂಟುವಿನಲ್ಲಿ ಕ್ಷೇತ್ರತಜ್ಞರಾಗಿ ಕೆಲಸ, ಕರ್ನಾಟಕ ಜಾನಪದ ವಿವಿಯಲ್ಲಿ ಬೋಧಕರಾಗಿ ಅನುಭವ, ಶಿವರಾಮ ಕಾರಂತ ಟ್ರಸ್ಟ್‌ನಲ್ಲಿ ಸದಸ್ಯೆ, ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಸ್ಥಾಪಕ ಅಧ್ಯಕ್ಷೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್. ರಂಗೋಲಿ ಪತ್ರಿಕೆ, ರಂಗೋಲಿ ಕ್ಯಾನ್ವಾಸ್ ಪೈಂಟಿಂಗ್, ಬೃಹತ್ ರಂಗೋಲಿ ಪ್ರದರ್ಶನ, ತಮಿಳುನಾಡಿನಲ್ಲಿ ರಂಗೋಲಿಯಲ್ಲಿ ವಿಶ್ವದಾಖಲೆ, ಮಕ್ಕಳಿಗೆ ರಂಗೋಲಿ ತರಬೇತಿ, ಸ್ವರಚಿತ ರಂಗೋಲಿ ವಿನ್ಯಾಸಗಳ ರಚನೆ ಪ್ರಕಟಣೆ ಇತ್ಯಾದಿ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರು ಪಡೆದಿರುತ್ತಾರೆ.

Edited By : PublicNext Desk
Kshetra Samachara

Kshetra Samachara

03/11/2026 11:02 am

Cinque Terre

92

Cinque Terre

0

ಸಂಬಂಧಿತ ಸುದ್ದಿ