ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ದೂರಿಯಾಗಿ ಜರುಗಿದ ಪಬ್ಲಿಕ್ ನೆಕ್ಸ್ಟ್‌ನ ನವದುರ್ಗಾ ವೈಭವ-2026 ಪ್ರಶಸ್ತಿ ಪ್ರದಾನ ಸಮಾರಂಭ

ಹುಬ್ಬಳ್ಳಿ : ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಮಹಿಳೆಯರಿಗಾಗಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ಕಲರ್ ಕಲರ್ ಫೋಟೋಗಳನ್ನು ಕಳುಹಿಸುವ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸಾವಿರಾರು ಮಹಿಳೆಯರು ಫೋಟೋಗಳನ್ನು ಕಳುಹಿಸುವ ಮೂಲಕ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದೊಂದಿಗೆ ನವರಾತ್ರಿ ಹಬ್ಬವನ್ನು ಆಚರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗಾಗಿ ನವದುರ್ಗಾ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದ್ದೂರಿಯಾಗಿ ನಡೆಯಿತು.

ಹೌದು, ಪ್ರತಿವರ್ಷದಂತೆ ಈ ವರ್ಷವೂ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ, ಎಸ್.ಎಸ್. ಮುರುಡಿ ಸಂಸ್ಥೆ ಹಾಗೂ ಪತಂಜಲಿ ಸಹಭಾಗಿತ್ವದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಸಭಾಭವನದಲ್ಲಿ ನವದುರ್ಗಾ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ರುದ್ರಾಕ್ಷಿಮಠದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಶಶಿಕಾಂತ ಬಿಜವಾಡ, ಬೆಳಗಾವಿ ಮೇಯರ್ ಪ್ರೀತಿ ವಿನಾಯಕ ಕಾಮಕರ, ಎಸ್.ಎಸ್. ಮುರುಡಿ ಸಂಸ್ಥೆಯ ಮಾಲೀಕರಾದ ಶಿವರಾಜ ಎಸ್. ಮುರುಡಿ ಹಾಗೂ ಪತಂಜಲಿ ಸಂಸ್ಥೆಯ ಕಿರಣಕುಮಾರ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಈ ವೇಳೆ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಕುಟುಂಬದ ಜವಾಬ್ದಾರಿಯ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂತಹ ಸಾಧಕಿಯರನ್ನು ಗುರುತಿಸಿ ಗೌರವಿಸುವ ಪಬ್ಲಿಕ್ ನೆಕ್ಸ್ಟ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಮಹಿಳಾ ಶಕ್ತಿಯ ಸಂಭ್ರಮ, ಗಣ್ಯರ ಮೆಚ್ಚುಗೆಯ ಮಾತುಗಳು ಹಾಗೂ ನೂರಾರು ಮಹಿಳೆಯರ ಉಪಸ್ಥಿತಿಯೊಂದಿಗೆ ಪಬ್ಲಿಕ್ ನೆಕ್ಸ್ಟ್‌ನ ನವದುರ್ಗಾ ವೈಭವ-2026 ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/11/2026 03:53 pm

Cinque Terre

11.53 K

Cinque Terre

1

ಸಂಬಂಧಿತ ಸುದ್ದಿ