ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್.ಆರ್.ಪುರ: ಅಕ್ರಮ ಗೋ ಸಾಗಾಟ ಜಾಲ ಪತ್ತೆ: ವಾಹನ ಸಮೇತ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಯುವಕ

ಎನ್.ಆರ್.ಪುರ: ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಹಿಂಸಾತ್ಮಕ ರೀತಿಯಲ್ಲಿ ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವೊಂದು ಖಾಂಡ್ಯ ಅರಣ್ಯ ಇಲಾಖೆ ತಪಾಸಣಾ ಕೇಂದ್ರದ ಬಳಿ ಪತ್ತೆಯಾಗಿದೆ.

ಸೋಮೇಗೌಡ ಎಂಬಾತ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಅನುಮಾನಗೊಂಡ ಯುವಕನೊಬ್ಬ, ವಾಹನವನ್ನು ತಡೆದು ನಿಲ್ಲಿಸಿ ವಿಚಾರಿಸಿದ ವೇಳೆ ಸಾಗಾಟಕ್ಕೆ ಯಾವುದೇ ದಾಖಲೆಗಳಿಲ್ಲದಿರುವುದು ದೃಢಪಟ್ಟಿದ್ದು, ತಕ್ಷಣವೇ ಆರೋಪಿ ಹಾಗೂ ಗೋವುಗಳಿದ್ದ ವಾಹನವನ್ನು ಹಿಡಿದು ಬಾಳೆಹೊನ್ನೂರು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ರಮ ಗೋ ಸಾಗಾಟದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

03/11/2026 10:28 pm

Cinque Terre

660

Cinque Terre

0

ಸಂಬಂಧಿತ ಸುದ್ದಿ