ಮೂಡಿಗೆರೆ: 'ಲೆಂಡಿಂಗ್ ಕಾರ್ಟ್' ಎಂಬ ಫೈನಾನ್ಸ್ ಕಂಪನಿಯಿಂದ ದೊಡ್ಡ ಮೊತ್ತದ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 8.99 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೀಪ್ ಎಂಬುವವರೇ ವಂಚನೆಗೊಳಗಾದವರಾಗಿದ್ದು, ಬೆಂಗಳೂರಿನ ಸಂಪತ್ ಕುಮಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸಾಲದ ಭರವಸೆ ನೀಡಿ ಹಣ ಪಡೆದುಕೊಂಡಿದ್ದ ಸಂಪತ್ ಕುಮಾರ್, ಇತ್ತ ಸಾಲವನ್ನೂ ಕೊಡಿಸದೆ, ಅತ್ತ ಪಡೆದಿದ್ದ ಹಣವನ್ನೂ ಮರಳಿಸದೆ ಸತಾಯಿಸಿ ವಂಚಿಸಿದ್ದಾನೆ ಎಂದು ಪ್ರದೀಪ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಇದೀಗ ಮೂಡಿಗೆರೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
03/11/2026 10:32 pm
LOADING...