ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಕ್ರೀಡೆ ಅವಶ್ಯಕ

ನವಲಗುಂದ : ಸರ್ಕಾರಿ ನೌಕರರು ನಿತ್ಯದ ಕಚೇರಿ ಕೆಲಸದ ಒತ್ತಡದಿಂದ ಹೊರಬಂದು, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ. ನೌಕರರ ನಡುವೆ ಪರಸ್ಪರ ಸೌಹಾರ್ದತೆ, ಸಹೋದರತ್ವ ಹಾಗೂ ಬಾಂಧವ್ಯ ಗಟ್ಟಿಗೊಳ್ಳಲು ಕ್ರೀಡೆಗಳು ಉತ್ತಮ ವೇದಿಕೆಯಾಗಿವೆ ಎಂದು ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದರು.

ನಗರದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಸರ್ಕಾರಿ ನೌಕರರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಿ, ವಿಜೇತರಿಗೆ ಹಾಗೂ ರನ್ನರ್-ಅಪ್ ಕೃಷಿ ಇಲಾಖೆ ತಂಡಗಳಿಗೆ ಟ್ರೋಫಿ ಮತ್ತು ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ವೇಳೆ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ತಹಶೀಲ್ದಾರ ಸುದೀರ ಸಾಹುಕಾರ, ವಿ ಡಿ ರಂಗಣ್ಣವರ, ಸಿಪಿಐ ರವಿಕುಮಾರ ಕಪ್ಪತ್ತನವರ, ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಪುರಸಭೆ ಮುಖ್ಯಧಿಕಾರಿ ಎಸ್ ಪಿ ಪೂಜಾರ, ಅಣ್ಣಿಗೇರಿ ಪುರಸಭೆ ಮುಖ್ಯಧಿಕಾರಿ ವೈ ಎಸ್ ಗದ್ದಿಗೌಡರ, ತಾ.ಪಂ ಇಓ ರವೀಂದ್ರಗೌಡ ಪಾಟೀಲ, ಆನಂದ ಹವಳಕೋಡ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕ್ರೀಡಾಭಿಮಾನಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/11/2026 01:23 pm

Cinque Terre

10.72 K

Cinque Terre

0

ಸಂಬಂಧಿತ ಸುದ್ದಿ