", "articleSection": "Infrastructure,Health & Fitness", "image": { "@type": "ImageObject", "url": "https://prod.cdn.publicnext.com/s3fs-public/229640-1750081103-sad.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChikkaballapur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗೌರಿಬಿದನೂರು : ಸೂಕ್ತ ಸಮಯಕ್ಕೆ ವೈದ್ಯರು ಹಾಗೂ ಆಂಬುಲೆನ್ಸ್ ಸೌಲಭ್ಯ ಸಿಗದ ಕಾರಣಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ...Read more" } ", "keywords": "Chikkaballapur, ambulance negligence, medical emergency, patient death, healthcare failure, ambulance service issues", "url": "https://dashboard.publicnext.com/node" }
ಗೌರಿಬಿದನೂರು : ಸೂಕ್ತ ಸಮಯಕ್ಕೆ ವೈದ್ಯರು ಹಾಗೂ ಆಂಬುಲೆನ್ಸ್ ಸೌಲಭ್ಯ ಸಿಗದ ಕಾರಣಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದಿನ್ನೆನಹಳ್ಳಿಯಲ್ಲಿ ನಡೆದಿದೆ.
ಪಂಚಾಯತಿಯ ಗ್ರೇಡ್ 2 ಕಾರ್ಯದರ್ಶಿ ಅಶ್ವತ್ಥಪ್ಪ ಎಂಬ ವ್ಯಕ್ತಿ ಹಸುವಿನ ಮೇವು ಕುಯ್ಯವಾಗ ವಿಷಪೂರಿತ ಹಾವು ಕಡಿದಿದೆ. ಸ್ಥಳದಲ್ಲಿದ್ದ ಕುಟುಂಬಸ್ಥರು ಮಂಚೆನಹಳ್ಳಿಯ ಸರ್ಕಾರಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್‌ನಲ್ಲಿ ಪೆಟ್ರೋಲ್ ಇಲ್ಲ, ತಡವಾಗಿ ಬರುವುದಾಗಿ ತಿಳಿಸಿದ್ದಾರೆ. ತುರ್ತು ಚಿಕಿತ್ಸೆಗೆಂದು ಡಿ ಪಾಳ್ಯದ ಆಸ್ಪತ್ರೆ ಹೋಗಿದ್ದಾರೆ. ಅಲ್ಲಿಯೂ ಸಹ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎಂದು ತಿಳಿಸಿದ್ದಾರೆ.
ಅಲ್ಲಿ ವೈದ್ಯರಿಲ್ಲದೆ ಅಲ್ಲಿಂದ ಆಟೋದಲ್ಲಿ ಗೌರಿಬಿದನೂರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಾಗ ಮೃತ ಪಟ್ಟಿದ್ದಾರೆ. ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಹಾಗೂ ವ್ಯೆದ್ಯರು ಸಿಕ್ಕಿದ್ದರೆ ನಮ್ಮ ತಂದೆಯ ಜೀವ ಉಳಿಯುತಿತ್ತು ಎಂದು ಮೃತ ಅಶ್ವಥಪ್ಪನ ಮಕ್ಕಳು ದುಃಖಿಸಿದ್ದಾರೆ.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
16/06/2025 07:08 pm