", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1750438063-ckbl.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಂತಾಮಣಿ : ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲು 2024-25ನೇ ಸಾಲಿನಲ್ಲಿ ಅಂದಾಜು ಮೊತ್ತ 10 ಲಕ್ಷ ಮಂಜುರಾಗಿದ್ದು, ಅದರ ನಾಮಫಲಕವೂ ಸಹ ...Read more" } ", "keywords": "Chikkaballapur NREGA scam, bill passed without work, fund misappropriation, corruption allegations, rural development scheme, Karnataka news update", "url": "https://dashboard.publicnext.com/node" }
ಚಿಂತಾಮಣಿ : ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲು 2024-25ನೇ ಸಾಲಿನಲ್ಲಿ ಅಂದಾಜು ಮೊತ್ತ 10 ಲಕ್ಷ ಮಂಜುರಾಗಿದ್ದು, ಅದರ ನಾಮಫಲಕವೂ ಸಹ ಶಾಲೆಯ ಆವರಣದಲ್ಲಿ ಅಳವಡಿಸಲಾಗಿದೆ.
ಆದರೆ ಇದುವರಿಗೂ ಕಾಂಪೌಂಡ್ ಕಾಮಗಾರಿ ನಿರ್ಮಾಣ ಮಾಡದೆಯೇ ಮೂರು ಕಂತುಗಳಲ್ಲಿ ಹಣ ಡ್ರಾ ಮಾಡಿಕೊಂಡ ಬಗ್ಗೆ ವೆಬ್‌ಸೈಟ್ ಮುಖಾಂತರ ಅಕ್ರಮ ಬಯಲಾಗಿದೆ. ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಸಿಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೊದಲನೇ ಕಂತಿನಲ್ಲಿ 37 ಸಾವಿರ, ಎರಡನೇ ಕಂತಿನಲ್ಲಿ 37 ಸಾವಿರ ಮೂರನೇ ಕಂತಿನಲ್ಲಿ 29,600 ರೂಪಾಯಿಗಳು ಹಣ ಡ್ರಾ ಮಾಡಲಾಗಿದೆ. ಕಾಂಪೌಂಡ್ ನಿರ್ಮಾಣವಾಗದೇ ಇಷ್ಟೊಂದು ಹಣ ಡ್ರಾ ಮಾಡಿರುವದು ನೋಡಿದ್ರೆ ಅಧಿಕಾರಿಗಳು ಸಹ ಇದರಲ್ಲಿ ಶಾಮೀಲಾದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಹಾಗಾದ್ರೆ ನರೇಗಾ ಯೋಜನೆಯಲ್ಲಿ ಹಣ ತಿಂದು ತೇಗಿರುವವರ ವಿರುದ್ಧ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
PublicNext
20/06/2025 10:21 pm