", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1750563599-raj.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಂತಾಮಣಿ: ರಾಜ ಕಾಲುವೆ ಒತ್ತುವರಿಯಾಗಿದ್ದನ್ನು ಕೂಡಲೇ ಗುರ್ತಿಸಿ ಬಿಡಿಸಿಕೊಟ್ಟು ರೈತರ ಹೊಲಗಳಿಗೆ ಹಾಗೂ ಮನೆಗಳಿಗೆ ಹೋಗಲು ದಾರಿ ಮಾಡಿಕೊಡುವಂತೆ...Read more" } ", "keywords": "Chikkaballapur, Rajakaluve issue, water channel identification, agriculture benefits, drainage solution.", "url": "https://dashboard.publicnext.com/node" }
ಚಿಂತಾಮಣಿ: ರಾಜ ಕಾಲುವೆ ಒತ್ತುವರಿಯಾಗಿದ್ದನ್ನು ಕೂಡಲೇ ಗುರ್ತಿಸಿ ಬಿಡಿಸಿಕೊಟ್ಟು ರೈತರ ಹೊಲಗಳಿಗೆ ಹಾಗೂ ಮನೆಗಳಿಗೆ ಹೋಗಲು ದಾರಿ ಮಾಡಿಕೊಡುವಂತೆ ಮುನಿವೆಂಕಟಪ್ಪರವರು ಮನವಿ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಂತಾಮಣಿ ತಾಲ್ಲೂಕಿನ ಬ್ಯಾಲಹಳ್ಳಿಯಿಂದ ಕೃಷ್ಣಾಪುರ ಗ್ರಾಮಕ್ಕೆ ಹೋಗುವ ರಾಜ ಕಾಲುವೆ ಬಿಡಿಸಿಕೊಡಿ. ಸರ್ವೆ ನಂ:17*1 ರಲ್ಲಿ ರೈತರ ಮನೆಗಳು ಇದ್ದು ಮಳೆಗಾಲದಲ್ಲಿ ಆ ಮನೆಗಳಿಗೆ ಹೋಗಿ ಬರಲು ದಾರಿ ಇಲ್ಲದಂತಾಗುತ್ತದೆ. ಹಾಗೆಯೇ ಮಳೆಗಾಲದಲ್ಲಿ ರೈತರ ಮಕ್ಕಳು ಶಾಲೆಗೆ ಹೋಗಿ ಬರಲು ಹರಸಹಾಸ ಪಡಬೇಕಾಗುತ್ತದೆ.
ಇನ್ನು ಕೃಷಿ ಚಟುವಟಿಕೆಗಳು ಮಾಡಲು ದಾರಿ ಇಲ್ಲದೆ ಇರುವ ಕಾರಣಕ್ಕೆ ಬಹಳ ತೊಂದರೆಯಾಗುತ್ತಿದೆ. ಈ ಕೂಡಲೇ ತಾಲ್ಲೂಕು ದಂಡಾಧಿಕಾರಿಗಳು ಮುನೇಶ್ವರ ದೇವಸ್ಥಾನದಿಂದ ರೈತ ಮುನಿ ವೆಂಕಟಪ್ಪರವರ ಮನೆವರೆಗೆ ದಾರಿ ಮಾಡಿಕೊಟ್ಟು ರಾಜ ಕಾಲುವೆಯನ್ನು ಈ ಕೂಡಲೇ ಬಿಡಿಸಿ ಕೊಡಬೇಕೆಂದು ಆಗ್ರಹಿಸಿದರು.
ವರದಿ : ಚಿಕ್ಕತೇಕಹಳ್ಳಿ ಡಿ.ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
22/06/2025 09:10 am