", "articleSection": "Law and Order,Viral", "image": { "@type": "ImageObject", "url": "https://prod.cdn.publicnext.com/s3fs-public/52563-1751038329-WhatsApp-Image-2025-06-27-at-8.57.18-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಅಹಮದಾಬಾದ್ : ಕೊವಿಡ್ -19 ಸಾಂಕ್ರಾಮಿಕ ರೋಗದ ಶುರುವಾದ ಮೇಲೆ ವರ್ಚುವಲ್ ಮೀಟಿಂಗ್ ಎನ್ನುವುದು ಸಾಮಾನ್ಯವಾಗಿದೆ. ಈ ವರ್ಚುವಲ್ ಮಿಟಿಂಗ್‌ಗಳು ಶು...Read more" } ", "keywords": "High Court virtual hearing, accused attends from toilet, Karnataka High Court news, virtual court proceedings, public outrage", "url": "https://dashboard.publicnext.com/node" }
ಅಹಮದಾಬಾದ್ : ಕೊವಿಡ್ -19 ಸಾಂಕ್ರಾಮಿಕ ರೋಗದ ಶುರುವಾದ ಮೇಲೆ ವರ್ಚುವಲ್ ಮೀಟಿಂಗ್ ಎನ್ನುವುದು ಸಾಮಾನ್ಯವಾಗಿದೆ. ಈ ವರ್ಚುವಲ್ ಮಿಟಿಂಗ್‌ಗಳು ಶುರುವಾದ ಮೇಲೆ ಕೆಲವರು ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡ ಅನೇಕ ವಿಡಿಯೋಗಳನ್ನು ನಾವು ನೀವೆಲ್ಲ ನೋಡಿದ್ದೇವೆ.
ಸದ್ಯ ಗುಜರಾತ್ ಹೈಕೋರ್ಟ್ ವಿಚಾರಣೆಗೆ ವ್ಯಕ್ತಿಯೊಬ್ಬ ಶೌಚಾಲಯದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಇಂತಹ ಘಟನೆಗಳು ಕಾನೂನಿಗೆ ಮಾಡುವ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋದಲ್ಲಿ ಗುಜರಾತ್ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠದ ಮುಂದೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ.
ಕೋರ್ಟ್ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವನು ಆರಂಭದಲ್ಲಿ ತನ್ನ ಫೋನ್ ಅನ್ನು ದೂರದಲ್ಲಿ ಇರಿಸಿದನು. ಆಗ ಆತ ಟಾಯ್ಲೆಟ್ನಲ್ಲಿ ಕುಳಿತಿರುವುದು ಕಂಡುಬಂದಿದೆ. ಕೋರ್ಟ್ ಕಲಾಪಕ್ಕೆ ಬೆಲೆ ಕೊಡದೆ ವರ್ಚುವಲ್ ಕೋರ್ಟ್ ವಿಚಾರಣೆಗಳ ಸಮಯದಲ್ಲಿ ಅನುಚಿತ ವರ್ತನೆ ತೋರಿದವರಿಗೆ ಕೋರ್ಟ್ ದಂಡದ ಬಿಸಿ ಮುಟ್ಟಿಸಿದೆ.
PublicNext
27/06/2025 09:05 pm