ಶಿರಸಿ: ಜೂನ್ 28 ರಂದು ನಗರದ ಪ್ರತಿಷ್ಠಿತ ಎಮ್ ಇ ಎಸ್ ಸಂಸ್ಥೆಯ ತೇಲಂಗ್ ಪ್ರೌಢ ಶಾಲೆಯಲ್ಲಿ ಉಚಿತ ಪಠ್ಯಪುಸ್ತಕ ಕಾರ್ಯಕ್ರಮದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಮಾತನಾಡಿದ ಜೆ ಡಿ ಎಸ್ ಮುಖಂಡ ಉಪೇಂದ್ರ ಪೈ ಅವರು ಕರ್ನಾಟಕದಲ್ಲಿ ಅತ್ಯಂತ ಶಿಸ್ತು ಬದ್ಧವಾದ ತೇಲಂಗ ಪ್ರೌಢ ಶಾಲೆಗೆ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕವನ್ನು ನಮ್ಮ ಉಪೇಂದ್ರ ಪೈ ಟ್ರಸ್ಟ್ ವತಿಯಿಂದ ನೀಡಲಾಗುತ್ತದೆ ಎಂದು ಹೇಳಿದರು.
ಈ ಶಾಲೆಗೆ ಇದು ನನ್ನ ಅಳಿಲು ಸೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶಕ್ಕೆ ಉತ್ತಮ ನಾಗರೀಕರಾಗಬೇಕೆಂದು ಹೇಳಿದರು. ಅಲ್ಲದೇ ಯಾವುದೇ ಬಡ ವಿದ್ಯಾರ್ಥಿಗಳಿಗೆ ಶಾಲೆಯ ಪಠ್ಯ ಪುಸ್ತಕ ಬೇಕಾದಲ್ಲಿ ನನಗೆ ತಿಳಿಸಿದರೆ ಆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಗುವುದು ಎಂದರು.
ನಂತರ ಮುಖ್ಯ ಶಿಕ್ಷಕಿ ಅಮೃತಾ ಬೀಳಗಿ ಅವರು ಮಾತನಾಡಿ ವಿದ್ಯೆ ಎನ್ನುವುದು ಅತ್ಯಂತ ಮಹತ್ವದ ಸಂಪತ್ತು. ವಿದ್ಯೆಯನ್ನು ಪಡೆದವರು ಅಗಾಧವಾದ ಶಕ್ತಿ ಉಳ್ಳವರಾಗಿರುತ್ತಾರೆ. ಅಂತವರಲ್ಲಿ ಒಬ್ಬರು ಉಪೇಂದ್ರ ಪೈ ಆಗಿದ್ದಾರೆ ಎಂದರು. ಅಲ್ಲದೇ ನಮ್ಮ ಶಾಲೆಗೆ ಇಂದು ಅವರು ಉಚಿತ ಪಠ್ಯ ಪುಸ್ತಕ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಾದ ನೀವು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಶಾಲೆಗೆ ಹಾಗೂ ದಾನಿಗಳಿಗೆ ಕೀರ್ತಿ ತರಬೇಕು ಎಂದರು. ದಾನವನ್ನು ಎಲ್ಲರೂ ಮಾಡುವುದಿಲ್ಲ, ಅದರಲ್ಲಿ ಕೆಲವರು ಇಂತಹ ದಾನ ಧರ್ಮ ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಅಂತವರಲ್ಲಿ ಒಬ್ಬರು ಈ ಉಪೇಂದ್ರ ಪೈ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರುಗಳಾದ ವೆಂಕಟೇಶ ಜೋಗಳೆಕರ, ಸುಮಾ ಹೆಗಡೆ, ಗಿರೀಶ ಹೆಗಡೆ, ದೈಹಿಕ ಶಿಕ್ಷಕ ಚಂದ್ರಕಾಂತ ತಳವಾರ, ಹಾಗೂ ಜೆಡಿಎಸ್ ಯುವ ಕಾರ್ಯಕರ್ತ ರೋಹಿತ್ ನಾಯ್ಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
PublicNext
28/06/2025 03:06 pm