", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/38927920250628025846filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjunathBhatkal" }, "editor": { "@type": "Person", "name": "8197584848" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಟ್ಕಳ : ತಾಲೂಕಾ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸರ್ಜನ್ ಡಾ. ಅರುಣ್ ಅವರನ್ನು ವರ್ಗಾವಣೆ ಮಾಡದಂತೆ ಪ್ರಜ್ಞಾವಂತ ನಾಗರೀಕರು...Read more" } ", "keywords": "Bhatkal Hospital Surgeon: Dr. Arun's transfer opposed", "url": "https://dashboard.publicnext.com/node" } ಭಟ್ಕಳ : ತಾಲೂಕಾ ಆಸ್ಪತ್ರೆ ಸರ್ಜನ್ ಡಾ. ಅರುಣ್ ವರ್ಗಾವಣೆ ಮಾಡದಂತೆ ಮನವಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ತಾಲೂಕಾ ಆಸ್ಪತ್ರೆ ಸರ್ಜನ್ ಡಾ. ಅರುಣ್ ವರ್ಗಾವಣೆ ಮಾಡದಂತೆ ಮನವಿ

ಭಟ್ಕಳ : ತಾಲೂಕಾ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸರ್ಜನ್ ಡಾ. ಅರುಣ್ ಅವರನ್ನು ವರ್ಗಾವಣೆ ಮಾಡದಂತೆ ಪ್ರಜ್ಞಾವಂತ ನಾಗರೀಕರು ಸೇರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ತಾಲೂಕಾ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಉತ್ತಮ ಸೇವೆ ನೀಡುವುದರ ಮೂಲಕ ಜನಹಿತ ಕಾರ್ಯ ಮಾಡುತ್ತಿರುವ ಇವರನ್ನು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿದ್ದು ಅವರ ಮೇಲೆ ಸುಳ್ಳು ದೂರುಗಳನ್ನು ಸಲ್ಲಿಸಿ ವರ್ಗಾವಣೆ ಮಾಡಲು ಹವಣಿಸುತ್ತಿದ್ದು ಅದಕ್ಕೆ ಅವಕಾಶ ನೀಡಬಾರದು ಎಂದು ಕೋರಲಾಗಿದೆ.

ಡಾ. ಅರಣ್ ಅವರು ತಮ್ಮ ಕರ್ತವ್ಯದ ಸಮಯದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದಲ್ಲದೇ ಬಡ ರೋಗಿಗಳಿಗೆ ಖಾಸಗೀ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಖರ್ಚಾಗುವ ಶಸ್ತ್ರ ಚಿಕಿತ್ಸೆಯನ್ನು ತಾಲೂಕಾ ಆಸ್ಪತ್ರೆಯಲ್ಲಿ ಮಾಡುವುದರಿಂದ ತೊಂದರೆಗೊಳಗಾದ ಕೆಲವರು ರಾಜಕೀಯ ಪ್ರೇರಿತ ಸಂಘಟನೆಗಳನ್ನು ಎತ್ತಿಕಟ್ಟಿ ಇವರ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದು ಗಮನಕ್ಕೆ ಬಂದಿದ್ದು ಅವುಗಳಿಗೆ ಯಾವುದೇ ಪ್ರಾಶಸ್ತ್ರ ಕೊಡಬಾರದು ಎಂದು ಕೋರಲಾಗಿದೆ.

ಈ ಸಂದರ್ಭದಲ್ಲಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪರಮೇಶ್ವರ ನಾಯ್ಕ ಕಂಡೇಕೋಡ್ಲು, ಶೇಷಗಿರಿ ನಾಯ್ಕ ಮುಟ್ಟಳ್ಳಿ ಶ್ರೀನಿವಾಸ್ ನಾಯ್ಕ ಹನುಮಾನ್ ನಗರ, ಗಣೇಶ ಹಳ್ಳೇರ್ ಮುಂಡಳ್ಳಿ, ರಾಜು ನಾಯ್ಕ ಬೆಳಲಖಂಡ, ಬಾಬು ನಾಯ್ಕ ಕಾರಗದ್ದೆ, ಶಂಕರ್ ನಾಯ್ಕ ಕಡವಿನಕಟ್ಟಾ ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಮನವಿಯನ್ನು ಸ್ವೀಕರಿಸಿದ ಕಚೇರಿ ಅಧೀಕ್ಷಕ ಪ್ರವೀಣ ಅವರು ಮೇಲಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.

Edited By : PublicNext Desk
PublicNext

PublicNext

28/06/2025 02:58 pm

Cinque Terre

5.82 K

Cinque Terre

0

ಸಂಬಂಧಿತ ಸುದ್ದಿ