", "articleSection": "Lifestyle,Entertainment,Health & Fitness", "image": { "@type": "ImageObject", "url": "https://prod.cdn.publicnext.com/s3fs-public/43124920250628120516filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉತ್ತರ ಕನ್ನಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಯುವನೀತಿ ಅನುಷ್ಠಾನ ಅಡಿಯಲ್ಲಿ ಇಲಾಖೆಯ ಕ್ರೀಡಾಂಗಣಗಳು, ...Read more" } ", "keywords": "Uttara Kannada, gym equipment grant, fitness initiative, Karnataka government schemes, sports infrastructure, fitness programs, gym equipment application, Uttara Kannada district news, Karnataka sports news, fitness grant scheme. ", "url": "https://dashboard.publicnext.com/node" } ಉತ್ತರ ಕನ್ನಡ: ಜಿಮ್ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕನ್ನಡ: ಜಿಮ್ ಉಪಕರಣ ಪಡೆಯಲು ಅರ್ಜಿ ಆಹ್ವಾನ

ಉತ್ತರ ಕನ್ನಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಯುವನೀತಿ ಅನುಷ್ಠಾನ ಅಡಿಯಲ್ಲಿ ಇಲಾಖೆಯ ಕ್ರೀಡಾಂಗಣಗಳು, ಕ್ರೀಡಾ ಶಾಲೆಗಳು ಹಾಗೂ ವಸತಿ ನಿಲಯ, ಸರಕಾರಿ ಕಾಲೇಜುಗಳು ಮತ್ತು ಪೋಲಿಸ್ ತರಬೇತಿ ಶಾಲೆಗಳಿಗೆ ಅತ್ಯಾಧುನಿಕ ಜಿಮ್ ಉಪಕರಣಗಳನ್ನು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. 

25*25 ಚದರ ಅಡಿ ಸ್ಥಳಾವಕಾಶವನ್ನು ಹೊಂದಿರುವ ಕ್ರೀಡಾಂಗಣಗಳು, ಕ್ರೀಡಾ ಶಾಲೆಗಳು, ವಸತಿ ನಿಲಯ, ಸರಕಾರಿ ಕಾಲೇಜುಗಳು ಮತ್ತು ಪೊಲೀಸ್ ತರಬೇತಿ ಶಾಲೆಗಳ ವಿವರವನ್ನು ಜುಲೈ 2 ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. 

ಅಲ್ಲದೇ ಗ್ರಾಮೀಣ ಯುವಜನತೆಯು ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವ ವಾತಾವರಣವನ್ನು ಸೃಜಿಸಲು ಯುವ ಚೈತನ್ಯ ಯೋಜನೆಯಡಿ ರಾಜ್ಯದ ಆಯ್ದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಶೇ. 70 ರಷ್ಟು ಹಾಗೂ ನಗರ ಪ್ರದೇಶದ ಶೇ.30 ರಂತೆ ಸಕ್ರಿಯವಾಗಿರುವ ನಾಲ್ಕು ಯುವ ಸಂಘಗಳನ್ನು ಸರಕಾರದ ಮಾರ್ಗಸೂಚಿ ಅನ್ವಯ ಆಯ್ಕೆ ಮಾಡಬೇಕಾಗಿದೆ. ಸಂಘಗಳು ಕನಿಷ್ಠ 25 ಯುವಜನರನ್ನು ಸದಸ್ಯರನ್ನಾಗಿ ಹೊಂದಿರಬೇಕು. ಎಲ್ಲಾ ಸದಸ್ಯರ ವಯೋಮಿತಿಯು 18 ರಿಂದ 35 ವರ್ಷದೊಳಗಿರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರುವ, ಕ್ರೀಯಾಶೀಲವಾಗಿರುವ ಯುವ ಸಂಘಗಳು ಜು. 17 ರೊಳಗಾಗಿ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480886551 ಕ್ಕೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

28/06/2025 12:05 pm

Cinque Terre

3.78 K

Cinque Terre

0