", "articleSection": "Infrastructure,Lifestyle,Nature", "image": { "@type": "ImageObject", "url": "https://prod.cdn.publicnext.com/s3fs-public/43124920250627072237filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಜೋಯಿಡಾ : ತಾಲೂಕಾ ಕೇಂದ್ರದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಗುಂದ-ಉಳವಿ ಮಾರ್ಗದಲ್ಲಿನ ಕೈಟಾ ಎಂಬಲ್ಲಿ ಸೇತುವೆ ಪಕ್ಕದಲ್ಲಿ ಭಾರಿ ಭೂ ಕುಸಿ...Read more" } ", "keywords": "Joida landslide, bridge collapse, land subsidence, Karnataka natural disaster, Uttara Kannada district, Supa taluk, Kali River, monsoon damage, infrastructure crisis, ", "url": "https://dashboard.publicnext.com/node" }
ಜೋಯಿಡಾ : ತಾಲೂಕಾ ಕೇಂದ್ರದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಗುಂದ-ಉಳವಿ ಮಾರ್ಗದಲ್ಲಿನ ಕೈಟಾ ಎಂಬಲ್ಲಿ ಸೇತುವೆ ಪಕ್ಕದಲ್ಲಿ ಭಾರಿ ಭೂ ಕುಸಿತ ಉಂಟಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಪಕ್ಕದ ಗಟಾರದ ನೀರು ಸರಾಗವಾಗಿ ಹರಿಯದೆ ಇರುವ ಹೆದ್ದಾರಿಯಲ್ಲೆ ತುಂಬಿಕೊಂಡ ಪರಿಣಾಮವಾಗಿ ಸೇತುವೆ ಪಕ್ಕದ ಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಈ ಹೆದ್ದಾರಿಯಲ್ಲಿ ದಾಂಡೇಲಿ, ಶಿರಸಿ, ಬೈಲಹೊಂಗಲ, ಬೆಳಗಾವಿ ಸೇರಿದಂತೆ ಹಲವು ಪ್ರಮುಖ ಕಡೆಗಳಿಗೆ ಸಂಚಾರವಿರುವ ಬಸ್‌ಗಳು ಓಡಾಡುತ್ತಿದ್ದು, ಭೂ ಕುಸಿತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಅತಂಕ ಮನೆಮಾಡಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತು ನಿರ್ವಹಣಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
27/06/2025 07:22 pm