ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್..!

ಹುಬ್ಬಳ್ಳಿ : ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ. ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಬಿಗ್ ಇಂಪ್ಯಾಕ್ಟ್. ವರದಿ ಪ್ರಸಾರಗೊಂಡ ಕೆಲವೇ ಕ್ಷಣಗಳಲ್ಲಿ ಹೊಸ ಕನ್ನಡದ ಬಾವುಟ ರಾರಾಜಿಸುತ್ತಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಚನ್ನಮ್ಮ ವೃತ್ತದ ಬಳಿಯಲ್ಲಿಯೇ ಸುಮಾರು ದಿನಗಳಿಂದ ಕನ್ನಡ ಬಾವುಟವೊಂದು ಹರಿದ ಸ್ಥಿತಿಯಲ್ಲಿ ಸಂಪೂರ್ಣ ಕೊಳೆಯಾಗಿ ಹಾರಾಡುತ್ತಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಕೆಲವು ಗಂಟೆಗಳಲ್ಲಿಯೇ ಆಟೋ ಚಾಲಕರ ಹಾಗೂ ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಹಳೆಯ ಬಾವುಟ ತೆರವು ಮಾಡಿ ಹೊಸ ಬಾವುಟ ಹಾರಿಸಿದ್ದಾರೆ.

ಕನ್ನಡ ನಾಡು, ನುಡಿಗಾಗಿ ಅದೆಷ್ಟೋ ಐತಿಹಾಸಿಕ ಕೊಡುಗೆ ನೀಡಿರುವ ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು. ಇಲ್ಲಿಯೇ ಕನ್ನಡಕ್ಕೆ ಅಪಮಾನವಾಗುವ ರೀತಿಯಲ್ಲಿ ಬಾವುಟ ಹಾರಾಡುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಹೊಸ ಬಾವುಟ ಹಾರಾಡುತ್ತಿದೆ. ಈ ಬಗ್ಗೆ ಆಟೋ ಚಾಲಕರು, ಸಂಘಟನೆಯ ಮುಖ್ಯಸ್ಥರು ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ತಕ್ಷಣವೇ ಆಟೋ ಚಾಲಕರು, ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಸ್ಪಂದಿಸುವ ಮೂಲಕ ಕನ್ನಡ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ.

ಕ್ಯಾಮೆರಾಪರ್ಸನ್ ಗಜಾನನ ಜೊತೆಗೆ ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/06/2025 08:57 pm

Cinque Terre

72.63 K

Cinque Terre

3

ಸಂಬಂಧಿತ ಸುದ್ದಿ