", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1751124337-manjunath---2025-06-28T205255.783.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಾಸ್ಕೋ: ಜನನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆ, ರಷ್ಯಾದ ಕರೇಲಿಯಾ ಪ್ರದೇಶದ ಸ್ಥಳೀಯ ಆಡಳಿತವೊಂದು ವಿದ್ಯಾರ್ಥಿನಿಯರಿಗೆ ಆಕರ್ಷಕ ಆ...Read more" } ", "keywords": "The most relevant answer part is: The Russian government is implementing financial incentives, such as one-time payments of 100,000 rubles (approximately $1,200), to pregnant students, including schoolgirls in some regions, to combat a declining birth rate and demographic crisis", "url": "https://dashboard.publicnext.com/node" } ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲಾನ್ : ಗರ್ಭಿಣಿಯಾದ ವಿದ್ಯಾರ್ಥಿನಿಯರಿಗೆ ಬಹುಮಾನ ಘೋಷಿಸಿದ ರಷ್ಯಾ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲಾನ್ : ಗರ್ಭಿಣಿಯಾದ ವಿದ್ಯಾರ್ಥಿನಿಯರಿಗೆ ಬಹುಮಾನ ಘೋಷಿಸಿದ ರಷ್ಯಾ!

ಮಾಸ್ಕೋ: ಜನನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆ, ರಷ್ಯಾದ ಕರೇಲಿಯಾ ಪ್ರದೇಶದ ಸ್ಥಳೀಯ ಆಡಳಿತವೊಂದು ವಿದ್ಯಾರ್ಥಿನಿಯರಿಗೆ ಆಕರ್ಷಕ ಆಫರ್ ನೀಡಿದೆ. 25 ವರ್ಷದೊಳಗಿನ ವಿದ್ಯಾರ್ಥಿನಿಯರು ಗರ್ಭಿಣಿಯಾಗಿದ್ರೆ, ಅವರಿಗೆ 81,000 ರೂಪಾಯಿ ಮೊತ್ತದ ನಗದು ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ಈ ವರ್ಷ ಜನವರಿಯಿಂದಲೇ ಯೋಜನೆ ಜಾರಿಯಲ್ಲಿದ್ದು, ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದರೆ ಮಾತ್ರ ಈ ಆರ್ಥಿಕ ಪುರಸ್ಕಾರವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶ, ರಷ್ಯಾದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣವನ್ನು ಏರಿಸುವುದು ಎನ್ನಲಾಗಿದೆ.

ಮಾಸ್ಕೋ ಟೈಮ್ಸ್ ವರದಿಯಂತೆ, ಈ ಯೋಜನೆಯಡಿ 1,00,000 ರಷ್ಯನ್ ರೂಬಲ್ (ಅಂದಾಜು ₹81,000) ನಗದು ಬಹುಮಾನ ನೀಡಲಾಗುತ್ತದೆ. ಇದರ ಲಾಭ ಪಡೆಯಲು, ವಿದ್ಯಾರ್ಥಿನಿ ಕರೇಲಿಯಾ ಪ್ರದೇಶದ ನಿವಾಸಿಯಾಗಿದ್ದು, ಸ್ಥಳೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರಬೇಕು ಎಂಬ ನಿಯಮಗಳನ್ನ ಜಾರಿ ಮಾಡಿದೆ.

ರಷ್ಯಾದ 11 ಪ್ರಾದೇಶಿಕ ಸರ್ಕಾರಗಳು ಕೂಡ ಇದೇ ಮಾದರಿಯ ಯೋಜನೆ ಜಾರಿಗೆ ತಂದಿವೆ. ಮಹಿಳಾ ವಿದ್ಯಾರ್ಥಿಗಳಿಗೆ ಹೆರಿಗೆಗೆ ನೇರ ಆರ್ಥಿಕ ನೆರವು ನೀಡುವ ಮೂಲಕ ದೇಶದ ಜನಸಂಖ್ಯಾ ಪ್ರಮಾಣವನ್ನು ಸಮತೋಲನಗೊಳಿಸಲು ಈ ದಾರಿ ಆಯ್ಕೆ ಮಾಡಲಾಗಿದೆ.

Edited By :
PublicNext

PublicNext

28/06/2025 08:59 pm

Cinque Terre

40.75 K

Cinque Terre

2

ಸಂಬಂಧಿತ ಸುದ್ದಿ