", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/229640-1751205449-ja.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JameelSagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ನದಿ- ಹ...Read more" } ", "keywords": "Sagara Jog Falls overflowing, Sharavati Vaibhava, Jog Falls water level high, Karagalu China Gate submerged, monsoon beauty in Sagara.", "url": "https://dashboard.publicnext.com/node" }
ಸಾಗರ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ನದಿ- ಹಳ್ಳಗಳು ಮತ್ತೆ ತುಂಬಿ ಹರಿಯಲು ಪ್ರಾರಂಭಿಸಿವೆ. ಜಗತ್ ಪ್ರಸಿದ್ಧ ಜೋಗ ಜಲಪಾತದಲ್ಲಿ ಮತ್ತೆ ಶರಾವತಿ ವೈಭವ ಹಾಗೂ ಜೋಗದ ಕಾರ್ಗಲ್ ಸಮೀಪ ಇರುವ ಚೈನಾ ಗೇಟ್ ತುಂಬಿ ಹರಿಯುತ್ತಿರುವ
ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೌದು.. ಮಳೆಗಾಲ ಪ್ರಾರಂಭವಾಯಿತು ಎಂದರೆ ಒಮ್ಮೆಯಾದರೂ ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಹೋಗುವ ಹಂಬಲ ಹೆಚ್ಚಾಗಿರುತ್ತದೆ. ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜೋಗ ಜಲಪಾತಕ್ಕೆ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕು ಸೇರಿದಂತೆ ಹೊರ ರಾಜ್ಯಗಳಿಂದ ಪ್ರವಾಸಿಗರು ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಮೂಲಕ ಶರಾವತಿ ಧುಮ್ಮಿಕ್ಕುತ್ತಿರುವುದನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
ಇನ್ನು ಜೋಗ ಜಲಪಾತಕ್ಕೆ ಚಾರಣ ಮಾರ್ಗ ಮಧ್ಯದಲ್ಲಿ ಸಿಗುವ ಕಾರ್ಗಲ್ ಸಮೀಪ ಇರುವ ಚೈನಾ ಗೇಟ್ ತುಂಬಿ ಹರಿಯುತ್ತಿತ್ತು. ಪ್ರವಾಸಿಗರು ಚೈನಾ ಗೇಟ್ ದೃಶ್ಯ ಕಣ್ಣು ತುಂಬಿಕೊಳ್ಳುತ್ತಿರುವ ದೃಶ್ಯ ಭಾನುವಾರ ಕಂಡು ಬಂತು.
ಜಮೀಲ್ ಸಾಗರ್ ಪಬ್ಲಿಕ್ ನೆಕ್ಸ್ಟ್ ಸಾಗರ
PublicNext
29/06/2025 07:27 pm