", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/421698-1751283907-MOBILE-HD.00_19_45_04.Still1178~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Chidananda Raibag" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಬಾಗ : ದೇವರ ಗುಡಿಯ ದೇಣಿಗೆ ಹುಂಡಿಯನ್ನು ಕದಿಯಲು ಯತ್ನಿಸಿದ ವ್ಯಕ್ತಿಯೋರ್ವ ಗ್ರಾಮಸ್ಥರ ಕೈಗೆ ಸಿಕ್ಕು ಬಿದ್ದು ಪೊಲೀಸ್ ರ ಅತಿಥಿಯಾಗಿದ ಘಟ...Read more" } ", "keywords": "Rayabagh temple hundi theft, temple donation box stolen Rayabagh, broad daylight theft Rayabagh, thief breaks into temple hundi, Rayabagh temple crime, hundi theft Karnataka, Rayabagh broad daylight robbery, temple theft news Rayabagh, culprit steals from hundi, Rayabagh religious place theft", "url": "https://dashboard.publicnext.com/node" }
ರಾಯಬಾಗ : ದೇವರ ಗುಡಿಯ ದೇಣಿಗೆ ಹುಂಡಿಯನ್ನು ಕದಿಯಲು ಯತ್ನಿಸಿದ ವ್ಯಕ್ತಿಯೋರ್ವ ಗ್ರಾಮಸ್ಥರ ಕೈಗೆ ಸಿಕ್ಕು ಬಿದ್ದು ಪೊಲೀಸ್ ರ ಅತಿಥಿಯಾಗಿದ ಘಟನೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಟ್ಟಟ್ಟಿ ಗ್ರಾಮದ ಶ್ರೀ ಅಡವಿ ಲಕ್ಷ್ಮೀದೇವಿಯ ದೇವಸ್ಥಾನದ ದೇಣಿಗೆ ಹುಂಡಿಯನ್ನು ಕಳುವು ಮಾಡಲು ಯತ್ನಿಸಿದ ವಿಡಿಯೋ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನಕ್ಕೆ ಯತ್ನಿಸಿದ ದ್ರಶ್ಯಗಳು ಕಂಡು ಬರುತಿದ್ದಂತೆ ಕೂಡಲೇ ದೇವಸ್ಥಾನದ ಕಡೆಗೆ ದೌಡಾಯಿಸಿ ಸ್ಥಳೀಯರು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸೆರೆಹಿಡಿದು ಥಳಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ರಾಯಬಾಗ ತಾಲೂಕಿನ ಸಿದ್ದಾಪೂರ ಗ್ರಾಮದ ನಿವಾಸಿ ವಿನಯ್ ಎಂದು ತಿಳಿದು ಬಂದಿದೆ.
ಇನ್ನೂ ಒಂದು ದಿನದ ಹಿಂದೆ ಸಂಜೆ 4 ಘಂಟೆ ಸುಮಾರಿಗೆ ಬೈಕ್ ಸವಾರಿ ಮಾಡಿಕೊಂಡು ಹೊರಟಿರುವ ವ್ಯಕ್ತಿ ರಸ್ತೆ ಪಕ್ಕದಲ್ಲಿರುವ ಶ್ರೀ ಅಡವಿ ಲಕ್ಷ್ಮೀದೇವಿಯ ದೇವಸ್ಥಾನ ಕಂಡು ಬೈಕ್ ನಿಲ್ಲಿಸಿ ದೇವರ ಹಣದ ಹುಂಡಿಯನ್ನು ಎಗರಿಸಲು ಪ್ರಯತ್ನ ಪಟ್ಟಿರುವ ಸಿಸಿ ಕ್ಯಾಮೆರಾ ದ್ರಶ್ಯಗಳು ಆಧಾರಿಸಿ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.
Kshetra Samachara
30/06/2025 05:15 pm