ದೇವನಹಳ್ಳಿ: ಒಂದೂವರೆ ಲಕ್ಷ ಹಣ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಗ್ರೇಡ್ 2 ತಹಶೀಲ್ದಾರ್ ದಿವಾಕರ್. ಹೌದು, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್, ದೂರುದಾರರಿಂದ ಸುಮಾರು ಒಂದೂವರೆ ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಆಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ನೆಲಮಂಗಲ ತಾಲೂಕಿನ ಗಿರಿಯನಪಾಳ್ಯದ ಸರ್ವೇ 1/1A1 ರೀ ಪೋಡಿ 1/4, 1/7. 8 .20 ಗುಂಟೆ ಕೋರ್ಟ್ ಸೇಲ್ ಡೀಡ್ ಪ್ರಕಾರ ಖಾತೆ ಮಾಡಬೇಕಾಗಿತ್ತು. ಇದನ್ನು ಮಾಡಿಕೊಡಲು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್, ದೂರುದಾರ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿಯ ವಕೀಲರಾದ ದೊರೆಸ್ವಾಮಿ ಎಲ್. ಅವರ ಬಳಿ ಸುಮಾರು 2 ಲಕ್ಷ ಬೇಡಿಕೆ ಇಟ್ಟಿದ್ದರು. ಒಂದೂವರೆ ಲಕ್ಷ ಕೊಡುವಂತೆ ಮಾತುಕತೆ ಆಗಿತ್ತು. ಅದರ ಪ್ರಕಾರ ಇಂದು ದೇವನಹಳ್ಳಿ ಬಳಿ ಮಾತುಕತೆ ಪ್ರಕಾರ ಒಂದೂವರೆ ಲಕ್ಷ ನೀಡುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಮತ್ತು ತಂಡ ದಾಳಿ ನಡೆಸಿ ಬಂಧಿಸಲಾಗಿದೆ. ಸದ್ಯ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
PublicNext
30/06/2025 10:49 pm