ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಶ್ರಮದಾನದ ಪೋಸ್ ಕೊಡುವಾಗ ಕಪ್ಪರಿಸಿ ಬಿದ್ದ ಸಮಾಜ ಸೇವಕ - ಆಮೇಲೇನಾಯ್ತು ನೋಡಿ

ಭೋಪಾಲ್: ಶ್ರಮದಾನ ಮಾಡುವ ವೇಳೆ ಸಮಾಜ ಸೇವಕನೊಬ್ಬ ಆಯತಪ್ಪಿ ತಾರಸಿಯಿಂದ ಕೆಳಗೆ ಬಿದ್ದ ಘಟನೆ ಮಧ್ಯಪ್ರದೇಶದ ಸಿಯೋನಿ ನಗರದಲ್ಲಿ ನಡೆದಿದೆ.

ಸಮಾಜ ಸೇವಕ ಡಾ. ಪ್ರಫುಲ್ ಶ್ರೀವಾಸ್ತವ್ ತಲ್ಸೆ ಎಂಬಾತರೇ ಆಯ ತಪ್ಪಿ ಬಿದ್ದವರು. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಅವರು ಕಾಂಕ್ರೀಟ್ ಮಿಶ್ರಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಶ್ರಮದಾನದ ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿ ಮೊದಲು ಒಂದು ಫೋಟೋ ತೆಗೆಸಿಕೊಂಡಿದ್ದಾರೆ. ಅದು ಸರಿ ಬರಲಿಲ್ಲವೆಂದು ಮತ್ತೊಂದು ಕಾಂಕ್ರೀಟ್ ಮಿಶ್ರಣದ ಬುಟ್ಟಿಯನ್ನ ತರಿಸಿಕೊಂಡು ಮತ್ತೊಮ್ಮೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಕಾಲಕೆಳಗಿನ ಮಣ್ಣು ಕಪ್ಪರಿಸಿದ ಪರಿಣಾಮ ಆರು ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.

ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಇಲ್ಲಿ ಚಿತ್ರಗುಪ್ತ ದೇಗುಲದ ಜೀರ್ಣೋದ್ದಾರ ಕೆಲಸ ನಡೆಯುತ್ತಿತ್ತು. ಪ್ರಫುಲ್ ಶ್ರೀವಾಸ್ತವ್ ಅವರು ಈ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಖ್ಯಸ್ಥರಾಗಿದ್ದರು. ವರದಿಯ ಪ್ರಕಾರ, ಈ ಕೆಲಸವನ್ನು ವಹಿಸಿಕೊಂಡ ಗುತ್ತಿಗೆದಾರರು ಅಧ್ಯಕ್ಷರಾಗಿ ಮೊದಲ ಬಟ್ಟಲ ಸಿಮೆಂಟ್ ಮಿಶ್ರಣವನ್ನು ತಾವೇ ಸುರಿಯಬೇಕು ಎಂದು ಅವರಿಗೆ ಹೇಳಿದ್ದರು ಎಂದು ವರದಿಯಾಗಿದೆ.

Edited By : Nagaraj Tulugeri
PublicNext

PublicNext

16/07/2025 03:17 pm

Cinque Terre

20.81 K

Cinque Terre

1

ಸಂಬಂಧಿತ ಸುದ್ದಿ