", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1753455952-manjunath-(71).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು : ಇತ್ತೀಚಿಗೆ ಅಪಘಾತಕೀಡಾಗಿದ್ದ ಕಾರಣ ವಿಶ್ರಾಂತಿಯಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನ...Read more" } ", "keywords": "Santosh Lad visits Michael Fernandes, Michael Fernandes health update, Labour Minister Santosh Lad, Michael V Fernandes former MLA, Bengaluru visit, Labour leader Michael Fernandes, Santosh Lad news, Michael Fernandes health check, Labour Minister news, Karnataka politics ", "url": "https://dashboard.publicnext.com/node" }
ಬೆಂಗಳೂರು : ಇತ್ತೀಚಿಗೆ ಅಪಘಾತಕೀಡಾಗಿದ್ದ ಕಾರಣ ವಿಶ್ರಾಂತಿಯಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್ ಅವರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನಿವಾಸದಲ್ಲಿ ಮೈಕೆಲ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡಿದ ಸಂತೋಷ್ ಲಾಡ್, ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಮಿಕರ ಏಳಿಗೆಗೆಗಾಗಿ ಶ್ರಮಿಸಿದ್ದ ಅವರ ಸೇವೆಯನ್ನು ಸ್ಮರಿಸಿ, ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಬೇಕಿರುವ ಪರಿಹಾರ ಮಾರ್ಗಗಳ ಕುರಿತು ಮೈಕೆಲ್ ಅವರೊಂದಿಗೆ ಚರ್ಚಿಸಿದರು.
ಕಾರ್ಮಿಕರ ಏಳಿಗೆಗಾಗಿ ಇಲಾಖೆ ತಂದಿರುವ ಹೊಸ ಯೋಜನೆಗಳ ಬಗ್ಗೆ ಇದೇ ಸಂಧರ್ಭದಲ್ಲಿ ಮೈಕೆಲ್ ಫರ್ನಾಂಡೀಸ್ ಅವರೊಂದಿಗೆ ಸಚಿವ ಸಂತೋಷ್ ಲಾಡ್ ಮಾಹಿತಿ ಹಂಚಿಕೊಂಡರು. ಕಾರ್ಮಿಕ ಇಲಾಖೆ ಸಚಿವರಾಗಿ ಕಾರ್ಮಿಕರ ಸಮಸ್ಯೆಗಳ ಬಗಗೆ ಸ್ಪಂದನೆ ವಹಿಸಿ ಕೆಲಸ ಮಾಡುತ್ತಿರುವುದಕ್ಕೆ ಸಚಿವ ಸಂತೋಷ್ ಲಾಡ್ ಅವರನ್ನು ಇದೇ ಸಂಧರ್ಭದಲ್ಲಿ ಮೈಕೆಲ್ ಫರ್ನಾಂಡೀಸ್ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮೈಕೆಲ್ ಫರ್ನಾಂಡೀಸ್ ಅವರ ಪತ್ನಿ ಡೋನಾ ಫರ್ನಾಂಡಿಸ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮಯೂರ್ ಮೋರೆ, ಮುಖಂಡರಾದ ಲಕ್ಷ್ಮಯ್ಯ ಕಾಳಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
PublicNext
25/07/2025 08:35 pm