", "articleSection": "Politics,Crime,Government", "image": { "@type": "ImageObject", "url": "https://prod.cdn.publicnext.com/s3fs-public/222042-1753943183-Canva---2025-07-31T115613.345.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ನಡುವೆ ಕೇಂದ್ರ...Read more" } ", "keywords": "Dharmasthala case, Pranav Mohanti, G Parameshwara, SIT investigation, mass burial site, Karnataka police, investigation update, Pranav Mohanti central services, SIT team, Karnataka government, investigation progress, Dharmasthala mystery, ", "url": "https://dashboard.publicnext.com/node" } ಧರ್ಮಸ್ಥಳ ಕೇಸ್‌ ದಿಕ್ಕು ತಪ್ಪಿಸಲು ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ - ಆರೋಪಕ್ಕೆ ಪರಮೇಶ್ವರ್ ಉತ್ತರವೇನು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ ಕೇಸ್‌ ದಿಕ್ಕು ತಪ್ಪಿಸಲು ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ - ಆರೋಪಕ್ಕೆ ಪರಮೇಶ್ವರ್ ಉತ್ತರವೇನು?

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ನಡುವೆ ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿ ಅವರ ಹೆಸರಿದೆ. ಸಾರ್ವಜನಿಕ ವಲಯದಲ್ಲಿ ಧರ್ಮಸ್ಥಳ ಪ್ರಕರಣ ದಿಕ್ಕು ತಪ್ಪಿಸಲು ಪ್ರಣವ್ ಮೊಹಂತಿ ಕೇಂದ್ರಕ್ಕೆ ಕಳಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಇದರಲ್ಲಿ ಬಹಳ ತಪ್ಪು ಕಲ್ಪನೆಗಳಿವೆ, ಧರ್ಮಸ್ಥಳ ಪ್ರಕರಣದಲ್ಲಿ ಡಿಜಿ ಲೆವೆಲ್ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಬೇಕು ಅಂತ ಹೇಳಿದ್ವಿ. ಹೀಗಾಗಿ ಮೊಹಂತಿ ಅವರನ್ನು ನೇಮಕ ಮಾಡಿದ್ವಿ. ಈಗ ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿ ಅವರ ಹೆಸರಿದೆ. ನಾವು ಇನ್ನೂ ಕೂಡ ಅದರ ಬಗ್ಗೆ ಏನು ತೀರ್ಮಾನವನ್ನು ತೆಗೆದುಕೊಂಡಿಲ್ಲ. ಅವರನ್ನು ಡೆಪ್ಯುಟೇಷನ್ ಮೇಲೆ ಕಳಿಸಬೇಕಾ ಬೇಡ್ವಾ ಅನ್ನೋದು ತೀರ್ಮಾನ ಆಗಿಲ್ಲ. ಅದು ಡಿಪಿಆರ್ ಅಂದ್ರೆ ಮುಖ್ಯಮಂತ್ರಿಗಳೇ ಬರುತ್ತದೆ. ಆದರೆ ಇನ್ನೂ ಯಾವುದೇ ತೀರ್ಮಾನವನ್ನು ನಾವು ತೆಗೆದುಕೊಂಡಿಲ್ಲ ಎಂದರು.

ಈ ನಡುವೆ ಇಲ್ಲ ಸಲ್ಲದ ಪೋಸ್ಟ್‌ಗಳನ್ನು ಹಾಕೋದು ಮಾಡುತ್ತಿದ್ದಾರೆ. ಅದೆಲ್ಲಾ ಸರಿ ಕಾಣುವುದಿಲ್ಲ, ಸರ್ಕಾರದ ಆಸಕ್ತಿ ಇದರಲ್ಲಿ ಏನಿದೆ? ಇಲ್ಲ ಅಂದ್ರೆ ನಾವು ಎಸ್ಐಟಿ ಯಾಕೆ ಮಾಡ್ತಿದ್ವಿ? ಸರ್ಕಾರಕ್ಕೆ ಸತ್ಯಾಂಶ ಹೊರಗೆ ಬರಬೇಕು ಅನ್ನೋದು ಮಾತ್ರ ಇರೋದು ಅದಕ್ಕಾಗಿ ಎಸ್ಐಟಿ ಮಾಡಿದ್ದೇವೆ. ಎಸ್ಐಟಿ ತನಿಖೆಯಿಂದ ಸತ್ಯಾಂಶ ಗೊತ್ತಾಗುತ್ತೆ ಅಷ್ಟೇ. ನಮಗೂ ಬೇಕಾಗಿರೋದು, ಸಾರ್ವಜನಿಕರಿಗೂ ಕೂಡ ಅದೇ ಬೇಕಿರೋದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಯಾರನ್ನು ರಕ್ಷಣೆ ಮಾಡಬೇಕು ಯಾರನ್ನು ಸಿಕ್ಕಿಹಾಕಿಸಬೇಕು. ಆ ರೀತಿಯಾದ ಯಾವುದೇ ಅಜೆಂಡಾ ಇಲ್ಲ. ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ನಾವು ಪಾರದರ್ಶಕವಾಗಿ ತನಿಖೆಯನ್ನು ಮಾಡಬೇಕು ಅಂತ ಹೇಳಿದ್ದೇವೆ. ಸರ್ಕಾರಕ್ಕೆ ಇರುವ ಅಜೆಂಡಾ ಕೂಡ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Edited By : Vijay Kumar
PublicNext

PublicNext

31/07/2025 11:57 am

Cinque Terre

46.45 K

Cinque Terre

1

ಸಂಬಂಧಿತ ಸುದ್ದಿ