", "articleSection": "Nature,Viral", "image": { "@type": "ImageObject", "url": "https://prod.cdn.publicnext.com/s3fs-public/387839-1754118612-WhatsApp-Image-2025-08-02-at-12.34.12-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬರ್ವಾನಿ (ಮಧ್ಯಪ್ರದೇಶ) : ಬರ್ವಾನಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಪರಿಚಿತ ನಿಗೂಢ ಪ್ರಾಣಿಯ ದಾಳಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ...Read more" } ", "keywords": "Mysterious animal attack, Barwani, Madhya Pradesh, rabies suspected, hyena or jackal suspected, animal bites, deaths, injuries, forest department investigation, compensation for victims' families. ", "url": "https://dashboard.publicnext.com/node" } WATCH : ಬರ್ವಾನಿಯಲ್ಲಿ ನಿಗೂಢ ಪ್ರಾಣಿ ದಾಳಿ - 6 ಸಾವು, 11 ಮಂದಿಗೆ ಗಾಯ - ಕತ್ತೆಕಿರುಬವೋ? ಬೇರೆ ಪ್ರಾಣಿಯೋ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : ಬರ್ವಾನಿಯಲ್ಲಿ ನಿಗೂಢ ಪ್ರಾಣಿ ದಾಳಿ - 6 ಸಾವು, 11 ಮಂದಿಗೆ ಗಾಯ - ಕತ್ತೆಕಿರುಬವೋ? ಬೇರೆ ಪ್ರಾಣಿಯೋ?

ಬರ್ವಾನಿ (ಮಧ್ಯಪ್ರದೇಶ) : ಬರ್ವಾನಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಪರಿಚಿತ ನಿಗೂಢ ಪ್ರಾಣಿಯ ದಾಳಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ದಾಳಿಯಿಂದ 6 ಮಂದಿ ಮೃತಪಟ್ಟಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಒಟ್ಟು 17 ಜನರನ್ನು ಅಪರಿಚಿತ ಪ್ರಾಣಿಯೊಂದು ಕಚ್ಚಿದ್ದು, ಎಲ್ಲರಿಗೂ ತುರ್ತು ಚಿಕಿತ್ಸೆ ಮತ್ತು ರೇಬೀಸ್ ಇಂಜೆಕ್ಷನ್ ನೀಡಲಾಗಿತ್ತು. ಆದರೆ, ಮೇ 23 ರಿಂದ ಜೂನ್ 2ರ ವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ದೇವೇಂದ್ರ ರೊಮೆಡೆ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ರಾಜ್‌ಪುರ ಸಮೀಪದ ಭಿಂಗೋರಾ ಗ್ರಾಮದ ರೈತನೊಬ್ಬ ತೆಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿರುವ ಪ್ರಾಣಿಯು ಕತ್ತೆಕಿರುಬ ಎಂದು ಊಹಿಸಲಾಗಿದೆ. ವಿಡಿಯೋದಲ್ಲಿ ನಾಯಿ ಬೆನ್ನಟ್ಟಿ ಬೊಗಳುತ್ತಿರುವ ದೃಶ್ಯ ಕಾಣಿಸುತ್ತಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ಅಧಿಕಾರಿಗಳ ಪ್ರಕಾರ, ಈ ನಿಗೂಢ ಪ್ರಾಣಿಗೆ ರೇಬೀಸ್ ವೈರಸ್ ಸೋಂಕು ಇರಬಹುದು ಎಂಬ ಶಂಕೆ ಇದೆ. ಈ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದು, ಮನೆಯ ಹೊರಗೆ ಕಾಲಿಡಲು ಹೆದರುತ್ತಿದ್ದಾರೆ. ಪ್ರಾಣಿಯ ನಿಖರ ಗುರುತು, ಚಲನೆ ಮತ್ತು ಆರೋಗ್ಯ ಸ್ಥಿತಿ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Abhishek Kamoji
PublicNext

PublicNext

02/08/2025 12:40 pm

Cinque Terre

12.27 K

Cinque Terre

0

ಸಂಬಂಧಿತ ಸುದ್ದಿ