", "articleSection": "Viral", "image": { "@type": "ImageObject", "url": "https://prod.cdn.publicnext.com/s3fs-public/463655-1754147474-manjunath---2025-08-02T204108.759.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ : ವೈರಲ್ ಪೋಸ್ಟ್‌ಗೆ ನಾನಾ ಪ್ರತಿಕ್ರಿಯೆ ಸ...Read more" } ", "keywords": "Man marries teacher, student, principal, supervisor, same school marriage, polygamous marriage, viral post, reactions, Saudi man, multiple wives, unusual marriage arrangement, school staff husbands, wife's profession, husband wife relationship, marriage controversy. ", "url": "https://dashboard.publicnext.com/node" } ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ : ವೈರಲ್ ಪೋಸ್ಟ್‌ಗೆ ನಾನಾ ಪ್ರತಿಕ್ರಿಯೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ : ವೈರಲ್ ಪೋಸ್ಟ್‌ಗೆ ನಾನಾ ಪ್ರತಿಕ್ರಿಯೆ

ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ : ವೈರಲ್ ಪೋಸ್ಟ್‌ಗೆ ನಾನಾ ಪ್ರತಿಕ್ರಿಯೆ

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿ, ಸೂಪರ್‌ ವೈಸರ್, ಪ್ರಿನ್ಸಿಪಾಲ್ ಮತ್ತು ಅಲ್ಲಿಯೇ ಓದುತ್ತಿರುವ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಮೊದಲು 'Life in Saudi Arabia' ಎಂಬ ಹೆಸರಿನ ಪೇಜ್‌ನಲ್ಲಿ ನಾಲ್ಕು ಮದುವೆಯ ಕುರಿತಾದ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ನಂತರ ನೆಟ್ಟಿಗರು AI ಇಮೇಜ್ ಬಳಸಿಕೊಂಡು ತಮಾಷೆ ಸಾಲುಗಳನ್ನು ಬರೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದಾರೆ.

ಈ ವ್ಯಕ್ತಿಯ ಮೊದಲ ಪತ್ನಿ ಶಿಕ್ಷಕಿ, ಎರಡನೇ ಪತ್ನಿ ಶಿಕ್ಷಕಿಯ ಮೇಲ್ವಿಚಾರಕಿ, ಮೂರನೇ ಪತ್ನಿ ಶಾಲೆಯ ಪ್ರಿನ್ಸಿಪಾಲ್ ಮತ್ತು ನಾಲ್ಕನೇ ಪತ್ನಿ ಅದೇ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದು, ಈ ವ್ಯಕ್ತಿಯನ್ನು ನೆಟ್ಟಿಗರು ತಮಾಷೆಯಾಗಿ "ಮಚ್ಚೆ ಇರುವ ವ್ಯಕ್ತಿ", "ಇಡೀ ಶಾಲೆಯ ಸಿಲ್ಯಾಬಸ್ ಕವರ್ ಮಾಡಿದ್ದಾನೆ!" ಎಂಬ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

OpIndia ವರದಿ ಪ್ರಕಾರ, ಈ ಸುದ್ದಿ ಮೊದಲಬಾರಿಗೆ 2012ರಲ್ಲೇ ಬೆಳಕಿಗೆ ಬಂದಿದ್ದು, ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2012ರಲ್ಲಿಯೇ Life in Saudi Arabia, The Independent, ಮತ್ತು Gulf News ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದವು.

Life in Saudi Arabia ವರದಿಯ ಪ್ರಕಾರ, ಈ ಸುದ್ದಿ ನಿಜವಾಗಿದ್ದು, ಆ ವ್ಯಕ್ತಿಯ ಮೂವರು ಪತ್ನಿಯರು ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರು ನಾಲ್ಕನೇ ಮದುವೆ ಮಾಡಿಕೊಂಡಾಗ, ಆ ಪತ್ನಿ ಕೂಡಾ ಅದೇ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದಳು. ಈ ನಾಲ್ವರೂ ಮಹಿಳೆಯರು ಪರಸ್ಪರ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಕೆಲವರು ಇದು ಸುಳ್ಳು ಸುದ್ದಿ ಮಕ್ಕಳನ್ನ ಇದೆ ಶಾಲೆಗೆ ಕಳಸಿದರೆ ಮತ್ತೊಂದು ದಾಖಲೆಯಾಗುತ್ತದೆ. ಚಿತ್ರದಲ್ಲಿ ಕಾನುವ ಮಹಿಳೆಯರು ಎಲ್ಲರೂ ಒಂದೇ ರೀತಿಯಾಗಿ ಕಾಣುತ್ತಾರೆ ಇದು ಎಐ ಆಧಾರಿತ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಮುಸ್ಲಿಮರು ನಾಲ್ಕು ಮದುವೆಯಾಗುತ್ತಾರೆ. ಆದ್ರೆ ನಾಲ್ಕು ಪತ್ನಿಯರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡೋದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಕಮೆಂಟ್ ಮಾಡಿದ್ದಾರೆ.

ಈ ವ್ಯಕ್ತಿಗೆ ಮತ್ತು ನಾಲ್ಕನೇ ಪತ್ನಿಯ ನಡುವಿನ ಅಂತರವೆಷ್ಟು ಇದು ಮುಸ್ಲಿ ರಾಷ್ಟ್ರದಲ್ಲಿ ಮಾತ್ರ ಸಾದ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

02/08/2025 08:41 pm

Cinque Terre

27.52 K

Cinque Terre

3

ಸಂಬಂಧಿತ ಸುದ್ದಿ