ಹುಬ್ಬಳ್ಳಿ: ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಪ್ರಕರಣ ಮುಂದುವರೆದಿದ್ದು, ಬೈಕ್ ಅಡ್ಡಗಟ್ಟಿ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಹುಬ್ಬಳ್ಳಿಯ ಶೀಮ್ಲಾ ನಗರದಲ್ಲಿ ನಡೆದಿದೆ.
ರಸ್ತೆಯಲ್ಲಿ ಹೊರಟಿದ್ದ ಬೈಕ್ ಅಡ್ಟಗಟ್ಟಿ ಏಕಾಏಕಿ ದಾಳಿ ಮಾಡಿದ್ದು, ಹತ್ತಕ್ಕೂ ಹೆಚ್ಚು ನಾಯಿಗಳಿಂದ ಏಕ ಕಾಲಕ್ಕೆ ದಾಳಿ ಮಾಡಿವೆ. ಬೈಕ್ ಸವಾರರು ಕಿರುಚಿಕೊಂಡರೂ ಬಿಡದ ನಾಯಿಗಳು ದಾಳಿ ಮಾಡಿದ್ದು, ಅಟ್ಯಾಕ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪದೇ ಪದೇ ನಾಯಿಗಳ ದಾಳಿಯಿಂದ ಜನರು ಬೆಚ್ಚಿ ಬಿದ್ದಿದ್ದಾರೆ.
ಕಳೆದ ಜುಲೈ 16 ರಂದು ಇದೇ ಶೀಮ್ಲಾ ನಗರದಲ್ಲಿ ಬಾಲಕಿ ಮೇಲೆ ನಾಯಿಗಳ ಅಟ್ಯಾಕ್ ಮಾಡಿದ್ದವು. ಬಾಲಕಿಯನ್ನು ಹಿಡಿದು ಎಳೆದೊಯ್ದಗಿದ್ದ ನಾಯಿಗಳು, ಕಾಲು, ಮೇಮೇಲೆ ಮನಬಂದಂತೆ ಕಚ್ಚಿದ್ದವು. ನಾಯಿಗಳ ದಾಳಿ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈಗ ಮತ್ತೆ ಅದೇ ನಗರದಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ ಮುಂದುವರೆದಿದ್ದು, ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಜನತೆ ಆಗ್ರಹಿಸಿದ್ದಾರೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/09/2025 12:10 pm