ಹೊಸಪೇಟೆ: ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಹಾಕದೇ ಇರುವ ತೆರಿಗೆ ಇಲ್ಲ. ಜನರ ಪಂಚೇಂದ್ರೀಯಗಳಿಂದಲೂ ರಕ್ತ ಹೀರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಹೆಸರಲ್ಲಿ ತೆರಿಗೆ ಹಾಕದೇ ಇರುವ ಕ್ಷೇತ್ರ ಯಾವುದೂ ಉಳಿದಿಲ್ಲ ಅಂತ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ರು.
ಹೊಸಪೇಟೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಯಾರಾದರೂ ಸಲಹೆ ಕೊಟ್ರೆ ಹೊಟ್ಟೆಯಲ್ಲಿರುವ ಹಸುಗೂಸಿಗೂ ಟ್ಯಾಕ್ಸ್ ಹಾಕಿ ಬಿಡ್ತಾರೆ ಅಂತ ವ್ಯಂಗ್ಯವಾಡಿದ್ರು.
PublicNext
04/09/2025 10:34 pm