ಹೊಸಪೇಟೆ: ಆರ್.ವಿ.ದೇಶಪಾಂಡೆ ಹಿರಿಯ ರಾಜಕಾರಣಿ, ಹತ್ತು ಬಾರಿ ಶಾಸಕರಾಗಿದ್ದಾರೆ. ಹಿರಿಯ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ದೇಶಪಾಂಡೆ ಅವರು ಅವಮಾನ ಆಗುವ ರೀತಿಯಲ್ಲಿ ಉತ್ತರ ನೀಡಬಾರದಿತ್ತು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಅಂತ ಸಿ.ಟಿ.ರವಿ ಹೇಳಿದ್ರು.
ಹೊಸಪೇಟೆಯಲ್ಲಿ ಮಾತಾಡಿದ ಅವರು, ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆಡಿದ ಮಾತಿನ ಮಾಹಿತಿ ನನಗಿಲ್ಲ. ಆದರೆ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಅಧಿಕಾರದಲ್ಲಿರುವವರ ಮನೆ ಬಾಗಿಲು ಕಾಯುವಂತಾಗಬಾರದು ಅಂತ ಹೇಳಿದ್ರು. ದಾವಣಗೆರೆ ಎಸ್‌ಪಿ, ಶ್ಯಾಮನೂರು ಮನೆತನದವರ ಮನೆ ಕಾಯುವ ಪೊಮರೇನಿಯನ್ ಕಾವಲು ನಾಯಿ ಅಂತ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹೇಳಿಕೆ ನೀಡಿದ್ರು.
PublicNext
04/09/2025 10:55 pm