", "articleSection": "News,Others", "image": { "@type": "ImageObject", "url": "https://prod.cdn.publicnext.com/s3fs-public/463655-1757067423-manjunath---2025-09-05T154652.278.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಬಳಿಯ ಕಣಿವೆ ತಿಮ್ಮಲಾಪುರ ಗ್ರಾಮದಲ್ಲಿ ಶ್ರೀಕೃಷ್ಣದೇವರಾಯ ಉಲ್ಲೇಖದ ಎರಡು ಮಹತ್ವದ ದಾನ...Read more" } ", "keywords": "kanive timmalapur inscription, sri krishnadevaraya inscription, donation inscription discovery, ancient inscription karnataka, krishnadevaraya stone inscription, kanive timmalapur temple inscription, historical inscription found, karnataka heritage news", "url": "https://dashboard.publicnext.com/node" }
ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಬಳಿಯ ಕಣಿವೆ ತಿಮ್ಮಲಾಪುರ ಗ್ರಾಮದಲ್ಲಿ ಶ್ರೀಕೃಷ್ಣದೇವರಾಯ ಉಲ್ಲೇಖದ ಎರಡು ಮಹತ್ವದ ದಾನ ಶಾಸನಗಳನ್ನ ತಿಮ್ಮಲಾಪುರದ ಡಾ. ನರಸಿಂಹ, ಗ್ರಾಮದ ನಾಗರಾಜ ನೆರವಿನೊಂದಿಗೆ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣಗೌಡ, ಡಾ. ವೀರಾಂಜನೇಯ ಸಂಶೋಧಕ ಎಚ್. ರವಿ ಅವರುಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ.
ಮಹತ್ವದ ಎರಡು ಶಾಸನಗಳು: ಈ ಎರಡು ಶಾಸನಗಳು ಅಪ್ರಕಟಿತವಾಗಿದ್ದು. ತುಂಬಾ ಮಹತ್ವವಾದವುಗಳಾಗಿವೆ. ಇದುವರೆಗೂ ಕೃಷ್ಣದೇವರಾಯನನ್ನು ಕೃಷ್ಣರಾಯ ಅಂತಾನೆ ಬಹುತೇಖ ಶಾಸನಗಳಲ್ಲಿ ಉಲ್ಲೇಖವಾಗಿದೆ. ಆದರೆ ಈಗ ನಮ್ಮ ತಂಡವು ಶೋಧಿಸಿದ ಶಾಸನಗಳಲ್ಲಿ ಶ್ರೀಕೃಷ್ಣದೇವರಾಯ ಎಂದು ನಮೂದಾಗಿದೆ. ಅಲ್ಲದೇ ಈ ಎರಡು ಶಾಸನಗಳು ದಾನ ಶಾಸನವಾಗಿದ್ದು ಒಂದು ಗ್ರಾಮದ ಒಳಗಡೆ ಇದ್ದರೆ ಇನ್ನೊಂದು ಕಾಲುವೆಯ ಬಳಿಯ ಹೊರವಲಯದ ಗದ್ದೆಯಲ್ಲಿರುವ ಹುಟ್ಟು ಬಂಡೆಗೆ ಬರೆಯಿಸಲಾಗಿದೆ ಎಂದು ಸಂಶೋಧಕರಾದ ಡಾ.ನರಸಿಂಹ ತಿಳಿಸಿದ್ದಾರೆ.
ತಿಮ್ಮಲಾಪುರವು ಶ್ರೀಕೃಷ್ಣದೇವರಾಯ ಆಳ್ವಿಕೆಯಲ್ಲಿ ಪ್ರಮುಖ ಕೇಂದ್ರವಾಗಿತ್ತು. ಅಲ್ಲದೇ ಈ ಊರು ಹಂಪಿಗೆ ಸಮೀಪದಲ್ಲಿದೆ. ಈ ಎರಡು ಶಾಸನಗಳು ಸುಂದರವಾದ ಅಕ್ಷರಗಳಲ್ಲಿ ಬರೆಸಲಾಗಿದೆ. ಈ ಶಾಸನವು ಪೂರ್ವಾಭಿಮುಖವಾಗಿದ್ದು ೩೩ ಸಾಲುಗಳನ್ನ ಒಳಗೊಂಡಿದೆ. ವಿಶೇಷವಾಗಿ ಶ್ರೀಕೃಷ್ಣದೇವರಾಯನ ಆಜ್ಞೆಯ ಮೇರೆಗೆ ಸಾಳುವ ತಿಮ್ಮರಸನು ಸೂಚಿಸಿದಂತೆ ಮಲ್ಲಿಕಾರ್ಜುನ ದೇವಾಲಯವೊಂದನ್ನು ರಾಣಿ ತಿರುಮಲಾಂಬ ಅವರ ಹೆಸರಿನಲ್ಲಿ ಕಟ್ಟಿಸಿ, ಅದರ ಪಕ್ಕದಲ್ಲಿ ಬಾವಿಯನ್ನು ಅಗೆಸಿ ಸಂತೆಯಿಂದ ಬಂದ ಹಣದಿಂದ ದೇಗುಲಕ್ಕೆ ಪೂಜಾ ಪರಿಕರಗಳನ್ನು ಅಲ್ಲಿನ ಪಾಳೆಯಗಾರರ ಹೆಸರಲ್ಲಿ ದಾನ ನೀಡಲಾಗಿದೆ ಎಂದು ವಿಜಯನಗರ ಪ್ರೊ. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
ಮೊದಲ ಶಾಸನ: ಕಣಿವೆ ತಿಮ್ಮಲಾಪುರದ ಗ್ರಾಮದೊಳಗೆ ಇರುವ ಈ ಶಾಸನವು ಗ್ರಾನೈಟ್ ಕಲ್ಲಿನಲ್ಲಿ ಬರೆಸಿದ ಅಕ್ಷರಗಳು ತುಂಬಾ ಸುಂದರವಾಗಿವೆ. ಗಣಾಧಿಪತಯೇ ಶುಭಮಸ್ತು ಎಂಬ ಸಾಲುಗಳಿಂದ ಆರಂಭಗೊಂಡ ಈ ಶಾಸನವು 12 ಅಡಿ ಎತ್ತರ 5 ಅಡಿ ಅಗಲವಾಗಿದೆ. ಕನ್ನಡ ಲಿಪಿಯ ಕನ್ನಡ ಭಾಷೆಯಲ್ಲಿರುವ ಈ ಶಾಸನದಲ್ಲಿ 33 ಸಾಲುಗಳಿವೆ. ಶಾಸನದ ಮೇಲ್ಭಾಗದಲ್ಲಿ ಎಡಗಡೆ ಸೂರ್ಯ, ಬಲಗಡೆ ಚಂದ್ರ ಚಿಹ್ನೆಯೊಂದಿಗೆ ಶಂಖ ಮತ್ತು ಚಕ್ರ ಚಿತ್ರಗಳ ಮದ್ಯೆ ಭಾಗದಲ್ಲಿ ವಿಷ್ಣುನಾಮದ ಚಿಹ್ನೆ ಇದೆ. ಜಯಾಭ್ಯದಯ ಶಾಲಿವಾಹನ ಶಕೆಯ ಶ್ರೀಮುಖ ಸಂವತ್ಸರದ ಕ್ರಿ.ಶ 1435 ನೆಯ ಅಂದರೆ ಕ್ರಿ.ಶ 1511ರ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ತಿಮ್ಮಲಾಪುರದ ಪಾಳೆಯಗಾರನಾದ ನಾಗಲಬೋವನ ಮಕ್ಕಳಾದ ಊಳಿಗದ ಹಿರಿಯಗದ್ದಯ್ಯ ಮತ್ತು ಚಿಕ್ಕಗದ್ದಯ್ಯ ಅವರು ಶ್ರೀಕೃಷ್ಣದೇವರಾಯ ಮತ್ತು ಆತನ ರಾಣಿ ತಿರುಮಲಾದೇವಿ ಅವರ ಹೆಸರಲಿ ಪಟ್ಟಣವನ್ನು ಕಟ್ಟಿಸಿ, ಮಲ್ಲಿಕಾರ್ಜುನ ಮತ್ತು ಹನುಮಂತ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿರುವುದು ಉಲ್ಲೇಖವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ಗೋವಿಂದ ತಿಳಿಸಿದ್ದಾರೆ.
ಎರಡನೇ ಶಾಸನ: ಕಣಿವೆ ತಿಮ್ಮಲಾಪುರದ ಹೊರವಲಯದ ಕಾಲುವೆಯ ಬಳಿಯ ಗದ್ದೆಯೊಂದರಲ್ಲಿ ಇರುವ ಹುಟ್ಟು ಬಂಡೆಗೆ ಶಾಸನವನ್ನು ಬರೆಯಿಸಲಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಮೊದಲಿಗೆ ಸೂರ್ಯ, ಚಂದ್ರರ ಚಿಹ್ನೆಗಳಿವೆ. ಇಲ್ಲಿಯೂ ಸಹ ಸ್ವಸ್ತಿಶ್ರೀ ಜಯಾಭ್ಯದಯ ಶಾಲಿವಾಹನ ಶಕ ವರುಷ ಶ್ರೀ ಮುಖ ಸಂವತ್ಸರ ಎಂದು ಆರಂಭಗೊಳ್ಳುತ್ತದೆ. ಶಾಸನದ ಕಾಲಾವಧಿಯು ಹಿಂದಿನ ಶಾಸನದಂತೆ ಇದ್ದು ಶ್ರೀಕೃಷ್ಣದೇವರಾಯನನ್ನು ರಾಜಾಧಿರಾಜ ರಾಜ ಪರಮೇಶ್ವರ ಎಂಬ ಬಿರುದುಳ್ಳ ಸಾಲುಗಳಿವೆ. ಇದರಿಂದ ಈ ಶಾಸನವು ಕೂಟ ಶಾಸನ ಆಗಿರಬೇಕೆನಿಸುತ್ತದೆ. ಹಾಗೇನೆ ಈ ಶಾಸನದ ಬಹುತೇಕ ಅಕ್ಷರಗಳು ಸವೆದು ಹೋಗಿವೆ. ಇದರಲ್ಲಿಯೂ ಸಹ 33 ಸಾಲುಗಳ ಕನ್ನಡ ಭಾಷೆಯ ಕನ್ನಡ ಲಿಪಿ ಹಾಗೂ ಅಲ್ಲಲ್ಲಿ ತೆಲುಗು ಭಾಷೆಯ ಪದಗಳನ್ನು ಬಳಸಿರುವುದು ವಿಶೇಷವಾಗಿದೆ. ಅಲ್ಲದೇ ಈ ಶಾಸನದ ಹಿಂಬದಿ ಹಾಗೂ ಕಲ್ಲಿನ ಎಡ ಮತ್ತು ಬಲಬದಿಗೆ ಲಿಪಿಯನ್ನು ಬರೆಸಲಾಗಿದೆ ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ.ಗೋವಿಂದ ತಿಳಿಸಿದ್ದಾರೆ.
ಕಣಿವೆ ತಿಮ್ಮಲಾಪುರದ ಈ ಎರಡು ಶಾಸನಗಳನ್ನು ಸಂರಕ್ಷಿಸದಾಗ ಮಾತ್ರ ಮುಂದಿನ ದಿನಗಳಲ್ಲಿ ಕಣಿವೆ ತಿಮ್ಮಲಾಪುರ ಊರಿನ ಮಹತ್ವವು ವಿಜಯನಗರ ಕಾಲದಲ್ಲಿ ಹೇಗಿತ್ತೆಂದು ತಿಳಿಯಲಿದೆ ಎಂದು ತಂಡದ ಮತ್ತೋರ್ವ ಸದಸ್ಯ ಡಾ.ಕೃಷ್ಣೆಗೌಡ ಅವರು ತಿಳಿಸಿದ್ದಾರೆ.
ಕಣಿವೆ ತಿಮ್ಮಲಾಪುರದಲ್ಲಿ ಶ್ರೀಕೃಷ್ಣದೇವರಾಯ ಉಲ್ಲೇಖದ ಎರಡು ದಾನ ಶಾಸನಗಳು ಪತ್ತೆ ಹೊಸಪೇಟೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಬಳಿಯ ಕಣಿವೆ ತಿಮ್ಮಲಾಪುರ ಗ್ರಾಮದಲ್ಲಿ ಶ್ರೀಕೃಷ್ಣದೇವರಾಯ ಉಲ್ಲೇಖದ ಎರಡು ಮಹತ್ವದ ದಾನ ಶಾಸನಗಳು ಪತ್ತೆಯಾಗಿವೆ ಅಂತ ವಿಜಯನಗರ ತಿರುಗಾಟ ಸಂಶೋಧನಾ ತಂಡ ಹೇಳಿದೆ.
Kshetra Samachara
05/09/2025 03:47 pm