ಚಿತ್ರದುರ್ಗ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುತಂತ್ರದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಚಿತ್ರದುರ್ಗ ನಗರದ ಯಾದವ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಯಾದವಾನಂದ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಭಂಡರಿದ್ದಾರೆ. ಹಾಗಾಗಿ ಎಲ್ಲವನ್ನು ಕುತಂತ್ರದಿಂದ ನಿರ್ವಹಿಸುತ್ತಿದ್ದಾರೆ. ಯಾರೇ ಕ್ಲೀನ್ ಚಿಟ್ ಕೊಟ್ಟರೂ ಸಿಎಂ ಮನಸಾಕ್ಷಿ ಅಪರಾಧಿ ಎನ್ನುತ್ತದೆ. ಹಿಂದೆ ಬಿಜೆಪಿ ಪಾದಯಾತ್ರೆ ವೇಳೆ 14 ನಿವೇಶನ ವಾಪಸ್ ನೀಡಿದ್ದರು.
ತಮ್ಮದು ತಪ್ಪಿಲ್ಲ ಎಂದರೆ ನಿವೇಶನ ಹಿಂದಿರುಗಿಸುವ ಕೆಲಸ ಮಾಡ್ತಿರಲಿಲ್ಲ. ಅವರು ಪ್ರಾಮಾಣಿಕರಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದರು.
PublicNext
06/09/2025 01:08 pm