", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/453685_1757330823_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "9538983230" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ : ಮದ್ದೂರು ಗಲಭೆ ಪ್ರಕರಣದ ಕುರಿತು ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, “ಪ್ರಕರಣದ ತನಿಖೆಯನ್ನು ಪೊಲೀ...Read more" } ", "keywords": "Ganesh Procession: No DJ in Hindu Mahaganapati procession in Chitradurga Minister's Decision: Minister D. Sudhakar's decision on Ganesh procession", "url": "https://dashboard.publicnext.com/node" }
ಚಿತ್ರದುರ್ಗ : ಮದ್ದೂರು ಗಲಭೆ ಪ್ರಕರಣದ ಕುರಿತು ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, “ಪ್ರಕರಣದ ತನಿಖೆಯನ್ನು ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಮಾಹಿತಿ ನೀಡುತ್ತೇವೆ,” ಎಂದರು.
ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ DJ ಪರ್ಮಿಷನ್ ಬಗ್ಗೆ ಮಾತನಾಡುತ್ತ, “ಯಾವುದಕ್ಕೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ, ನೀಡುವುದಿಲ್ಲ. ಎಲ್ಲೆಡೆ ಗಣೇಶ ವಿಸರ್ಜನೆ ನಡೆದಿದೆ. ಕಳೆದ ಬಾರಿ DJ ಧ್ವನಿಯಿಂದ ಹಲವು ಮಂದಿಗೆ ಕಿವಿ ಸಮಸ್ಯೆ ಉಂಟಾಗಿತ್ತು. ಸುಮಾರು 4 ಲಕ್ಷ ಜನ ಸೇರುವ ಕಾರಣದಿಂದ ನಗರದ ಪರಿಸರಕ್ಕೂ ಹಾನಿಯಾಗಬಹುದು. ಭಕ್ತಿಯಿಂದ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು,” ಎಂದರು.
ಹೊಳಲ್ಕೆರೆ ಪಟ್ಟಣದಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ವಿಸರ್ಜನೆ ನಡೆಸಲಾಗಿದೆ. ಅದೇ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡಬಹುದು ಎಂದು ಅವರು ಸಲಹೆ ನೀಡಿದರು. ಸರ್ಕಾರವೂ DJಗೆ ಅನುಮತಿ ನೀಡಬಾರದು ಎಂದು ಆದೇಶ ನೀಡಿದೆ ಎಂದು ತಿಳಿಸಿದರು.
“ಗಣೇಶನ ಆಚರಣೆ ನಿಷೇಧವಾಗುವುದಿಲ್ಲ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಬಹುದು. ಆದರೆ ಯಾವುದೇ ಕಾರಣಕ್ಕೂ DJಗೆ ಅನುಮತಿ ನೀಡಲಾಗುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.
PublicNext
08/09/2025 04:57 pm