ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು : ಹಿಂದೂ ಮಹಾಗಣಪತಿ ಬೃಹತ್ ಶೋಭಾ ಯಾತ್ರೆಗೆ ಚಾಲನೆ ನೀಡಿದ ಶ್ರೀರಾಮುಲು

ಮೊಳಕಾಲ್ಮುರು : ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಮತ್ತು ಮಾಜಿ ಸಚಿವ ಶ್ರೀರಾಮುಲು ಒಟ್ಟಿಗೆ ಚಾಲನೆ ನೀಡಿ ಗಮನ ಸೆಳೆದರು.

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಭಾನುವಾರದಂದು ಚಾಲನೆ ನೀಡಲಾಯಿತು.

ಶೋಭಾಯಾತ್ರೆಗೂ ಮುನ್ನವೇ ಮಹಾ ಗಣಪತಿಗೆ ಭಕ್ತಿ ಪೂರ್ವಕವಾಗಿ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಟ್ರಾಕ್ಟರ್ ನಲ್ಲಿ ಕೂರಿಸಲಾಯಿತು.

ಮುಖ್ಯ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗುತ್ತಿರುವ ವೇಳೆ ದ್ರಾಕ್ಷರಸ ಮತ್ತು ವೈನ್ ಬೋರ್ಡ್ ನಿಗಮ ಮಂಡಳಿ ಅಧ್ಯಕ್ಷರಾದ ಡಾ. ಬಿ ಯೋಗೇಶ್ ಬಾಬು ಆಗಮಿಸಿ ಗಣಪತಿಯನ್ನು ಕೂರಿಸಿಸಲಾಗಿದ್ದ ಟ್ರ್ಯಾಕ್ಟರ್ ಅನ್ನು ಚಲಾಯಿಸಿ ಗಮನ ಸೆಳೆದರು.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮೊಳಕಾಲ್ಮುರು ಪಟ್ಟಣವು ಸಂಪೂರ್ಣವಾಗಿ ಕೇಸರಿಮಯವಾಗಿತ್ತು,ಡಿಜೆ ಅಬ್ಬರವಿಲ್ಲದೆ ಶೋಭಾಯಾತ್ರೆ ನೀರಸವಾಗಿತ್ತು. ತಾಲೂಕಿನ ಬಹುತೇಕ ಗ್ರಾಮಗಳಿಂದ ಆಗಮಿಸಿದ್ದ ಯುವಕರು ಡಿಜೆ ಇಲ್ಲದ ಕಾರಣ ಸಂಜೆ 6ಗಂಟೆಗೆ ನಿರಾಸೆಯಿಂದಲೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಯಾವುದೇ ಅಹಿತಕರ ಘಟನೆಗಳು ನಡೆದಂತೆ ಪೊಲೀಸರು ಮೆರವಣಿಗೆಯುದ್ದಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು.

Edited By : PublicNext Desk
PublicNext

PublicNext

07/09/2025 06:53 pm

Cinque Terre

19.88 K

Cinque Terre

0

ಸಂಬಂಧಿತ ಸುದ್ದಿ