ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಗ್ಗು ಗುಂಡಿಗಳಿಂದ ಕೂಡಿದ ಧರ್ಮಪುರ ಹಾಗೂ ಬೇತೂರು ಸಂಪರ್ಕ ರಸ್ತೆ ...!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗಡಿ ಹೋಬಳಿ ಕೇಂದ್ರವಾಗಿರುವ ಧರ್ಮಪುರ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಖಂಡೇನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಬೇತೂರು, ಬೇತೂರು ಪಾಳ್ಯ, ಖಂಡೇನಹಳ್ಳಿ ಪಾಳ್ಯ ಹಾಗೂ ಅರಳೀಕೆರೆ ಸಂಪರ್ಕ ರಸ್ತೆಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ.

ರಸ್ತೆಗಳು ದುರಸ್ತಿ ಕಾಣದ್ದರಿಂದ ರಾತ್ರಿ ವೇಳೆ ಗುಂಡಿಗಳಿಗೆ ಬಿದ್ದು ಜನರು ಕೈಕಾಲು ಮುರಿದುಕೊಂಡಿದ್ದಾರೆ. ಬೇತೂರಿನಿಂದ ಚಳ್ಳಕೆರೆ ಗಡಿವರೆಗೂ ಇರುವ ರಸ್ತೆಯ ಸ್ಥಿತಿ ತೀರಾ ಗಂಭೀರವಾಗಿದೆ. ಬಸ್, ಕಾರು, ಲಾರಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳ ಸಂಚಾರ ತ್ರಾಸದಾಯಕವಾಗಿದ್ದು, ಪ್ರಯಾಣಿಕರು ನಿತ್ಯ ಶಪಿಸುತ್ತಾ ಇಲ್ಲಿ ಓಡಾಡುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

06/09/2025 05:37 pm

Cinque Terre

700

Cinque Terre

0

ಸಂಬಂಧಿತ ಸುದ್ದಿ