", "articleSection": "Infrastructure,WaterPower,News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1757162483-017~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ನಿರಂತರ ಮಳೆಯಿಂದ ಬರದ ನಾಡಿನ ಮೊಳಕಾಲ್ಮುರು ತಾಲೂಕಿನ ಏಕೈಕ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚಾಗ...Read more" } ", "keywords": "Chitradurga,Rangayyanadurga Dam,drought region,water released,Andhra Pradesh share,water dispute,local news,Karnataka,water management", "url": "https://dashboard.publicnext.com/node" } ಚಿತ್ರದುರ್ಗ: ಬರದ ನಾಡಿನ ಏಕೈಕ ರಂಗಯ್ಯನದುರ್ಗ ಡ್ಯಾಂನಿಂದ ಹೊರ ಬಿಟ್ಟ ಅಪಾರ ಪ್ರಮಾಣದ ನೀರು ಆಂಧ್ರದ ಪಾಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬರದ ನಾಡಿನ ಏಕೈಕ ರಂಗಯ್ಯನದುರ್ಗ ಡ್ಯಾಂನಿಂದ ಹೊರ ಬಿಟ್ಟ ಅಪಾರ ಪ್ರಮಾಣದ ನೀರು ಆಂಧ್ರದ ಪಾಲು

ಚಿತ್ರದುರ್ಗ: ನಿರಂತರ ಮಳೆಯಿಂದ ಬರದ ನಾಡಿನ ಮೊಳಕಾಲ್ಮುರು ತಾಲೂಕಿನ ಏಕೈಕ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯದ ಗೇಟ್ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದ್ದು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಡ್ಯಾಂ ವ್ಯಾಪ್ತಿಯ ರೈತರ ಉಪಯೋಗಕ್ಕೆ ಸಿಗದೇ ಅಪಾರ ಪ್ರಮಾಣದ ನೀರು ಆಂಧ್ರ ಪಾಲಾಗುತ್ತಿದೆ.

1977ರಲ್ಲಿ ಈ ಜಲಾಶಯ ನಿರ್ಮಾಣ ಮಾಡಲಾಗಿದೆ. 33 ಅಡಿ(ಅರ್ಧ ಟಿಎಂಸಿ)ನೀರು ಶೇಖರಣೆಯ ಸಾಮರ್ಥ್ಯ ಹೊಂದಿರುವ ಈ ಡ್ಯಾಂ 2009ರಿಂದ ಸತತವಾಗಿ ಮೂರು ಬಾರಿ ಹಾಗೂ 2022, 2024ರಲ್ಲಿ ಬಾಗಿನ ಸಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಭರ್ತಿಯಾಗಿ ಬಾಗಿನಕ್ಕೆ ಸಜ್ಜಾಗಿದೆ. ಜಗಳೂರು, ಸಂಡೂರು, ಕೂಡ್ಲಿಗಿ ಭಾಗದಲ್ಲಿ ಹೆಚ್ಚು ಮಳೆ ಸುರಿದು ಕೂಡ್ಲಿಗಿ ತಾಲೂಕಿನ ಗಂಡೇಬೊಮ್ಮನಹಳ್ಳಿ ಮತ್ತು ಸಂಗೇನಹಳ್ಳಿ ಹಳ್ಳದ ನೀರು ಹರಿದು ಬರುತ್ತಿರುವುದರಿಂದ ಡ್ಯಾಂ ಭರ್ತಿಯಾಗಿದೆ.

ಈ ಜಲಾಶಯವು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಜಲಾಶಯದ ವ್ಯಾಪ್ತಿಗೆ ಒಳಪಡುವ ಭಟ್ರಹಳ್ಳಿ, ಅಮಕುಂದಿ, ನಾಗಸಮುದ್ರ, ಸಿದ್ದಾಪುರ, ಹಿರೇಕೆರೆಹಳ್ಳಿ ಹಾಗೂ ಚಿಕ್ಕನಹಳ್ಳಿ ಕೆರೆಗಳಿಗೆ ನಿರ್ಮಿಸಿದ ಚಾನಲ್ ಮಾರ್ಗಗಳು ಅನೇಕ ದಶಕಗಳಿಂದಲೂ ಸೂಕ್ತ ನಿರ್ವಹಣೆ ಕೊರತೆಯಿಂದ ಹಾಗೂ ಬಳಕೆಯಿಲ್ಲದೆ ಹಾಳಾಗಿವೆ. ಈ ಕಾಲುವೆಗಳ ಮೂಲಕ ನೀರು ಹರಿಸಲು ಸಾಧ್ಯವಿಲ್ಲ, ಜಲಾಶಯ ತುಂಬಿ ಹೊರ ಹರಿದು ಹೋಗುವ ನೀರನ್ನು ತಡೆಹಿಡಿದು ತಾಲೂಕಿನ ರೈತರ ಅನುಕೂಲಕ್ಕೆ ಬಳಕೆ ಮಾಡುವಲ್ಲಿ ಸಣ್ಣನೀರಾವರಿ ಇಲಾಖೆ ಸಂಪೂರ್ಣವಾಗಿ ಸೋತಿದೆ.

ತಾಲೂಕಿನ ಆರು ಕೆರೆಗಳಿಗೆ ನೀರು ಹರಿಸಲು ಕಾಲುವೆಗಳನ್ನು ನಿರ್ಮಿಸಿ ದಶಕಗಳೇ ಕಳೆದಿವೆ.ಕಾಲುವೆ ದುರಸ್ತಿ ಮಾಡಿ ನೀರು ಸರಾಗವಾಗಿ ಹರಿಸಲು ಇಲಾಖೆಯ ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ವ್ಯವಸ್ಥೆ ಮಾಡದಿರುವುದರಿಂದ ನೀರು ಹರಿದು ಆಂಧ್ರದಲ್ಲಿ ಹರಿಯುವ ವೇದಾವತಿ ನದಿ ಮೂಲಕ ಮುಂದುವರಿದು ಕೃಷ್ಣನದಿಗೆ ಸೇರಲಿದೆ.

ವರದಿ:-ಎಚ್ ಮಹಾಂತೇಶ್ ರಾಯಾಪುರ

Edited By : Suman K
Kshetra Samachara

Kshetra Samachara

06/09/2025 06:11 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ