ಚಳ್ಳಕೆರೆ: ತಾಲೂಕಿನ ಜಡೇಕುಂಟೆ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಪದೇ ಪದೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರೇಹಾನ್ ಪಾಷ ಅವರು ಪೊಲೀಸ್ ಇನ್ಸ್ಪೆಕ್ಟರ್ ಕೆ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜನೆಯೊಂದಿಗೆ ರಸ್ತೆ ವಿಸ್ತರಣೆ ಕಾಮಗಾರಿ
ಕೈಗೊಂಡರು.
ಜಡೆಕುಂಡೆ ಗ್ರಾಮದ ರಸ್ತೆ ಮಧ್ಯಭಾಗದಿಂದ ಎರಡೂ ಬದಿಯಲ್ಲಿ ತಲಾ 5 ಮೀಟರ್ ವಿಸ್ತರಣೆಗೆ ಸೂಚಿಸಲಾಗಿತ್ತು. ಕೆಲವರ ಕಾಂಪೌಂಡ್,
ಮನೆ ಅಂಗಳಕ್ಕೆ ತೊಂದರೆ ಆಗುತ್ತಿದೆ ಎನ್ನುವ ಕಾರಣಕ್ಕೆ 6-7 ತಿಂಗಳಿನಿಂದ ಕೆಲವರು ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ. ತಹಸೀಲ್ದಾರ್
ಸಮ್ಮುಖದಲ್ಲಿ ಗ್ರಾಮದಲ್ಲಿ 300 ಮೀಟರ್ ಉದ್ದ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಿದ್ದಾರೆ.
ತಾಲೂಕು ಪಿಡಬ್ಲ್ಯುಡಿ ಎಇಇ ಅಬ್ದುಲ್ ಅಕ್ಕಿಂ ಮಾತನಾಡಿ ರಾಜ್ಯ ಹೆದ್ದಾರಿ ಯೋಜನೆಯಡಿ ಸಾಣೀಕೆರೆ ಗ್ರಾಮದಿಂದ
ಜಡೇಕುಂಟೆ ಮಾರ್ಗವಾಗಿ ಶಿಡ್ಲಯ್ಯನಕೋಟೆ ತನಕ ಕಾಮಗಾರಿ ಮಂಜೂರಾಗಿದೆ. ಜಡೇಕುಂಟೆ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಪಡಿಸಲಾಗಿತ್ತು. ವಾಹನಗಳ ಸಂಚಾರ ಮತ್ತು ರಸ್ತೆಗಳ ಅಭಿವೃದ್ಧಿ ದೃಷ್ಟಿಯಿಂದ ವಿಸ್ತರಣೆ ಅಗತ್ಯವಾಗಿತ್ತು. ಮುಂಗಡವಾಗಿ
ರಸ್ತೆ ಭಾಗವನ್ನು ಗುರುತು ಮಾಡಿ ನಿವಾಸಿಗಳಿಗೆ ತಿಳಿಸಲಾಗಿತ್ತು. ಅದರಂತೆ ಕಾಮಗಾರಿ ನಡೆಸಲಾಗಿದೆ ಎಂದರು..
Kshetra Samachara
09/09/2025 10:51 am