", "articleSection": "Politics,Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1757176554-WhatsApp-Image-2025-09-06-at-9.57.36-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶ್ರೀನಗರ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಒಮರ್ ಅವರ ಮಾತನ್ನೇ ಅನುಸರಿಸಿ, ಕೆಲವು ದುರಹಂಕಾರಿಗಳ ವಿರುದ್ದ ನಮಗೆ ಕೋಪ ಬರುವುದು ಸಹಜ ...Read more" } ", "keywords": "national emblem vandalism, omar abdullah, mehbooba mufti, waqf board controversy, hazratbal dargah, religious sentiments, kashmir politics, srinagar news, national symbol misuse, political reaction", "url": "https://dashboard.publicnext.com/node" } ರಾಷ್ಟ್ರೀಯ ಚಿಹ್ನೆ ಧ್ವಂಸ : ಒಮರ್ ಮಾತನ್ನೇ ಬೆಂಬಲಿಸಿ ವಕ್ಫ್ ಮಂಡಳಿ ವಿರುದ್ಧ ಕ್ರಮಕ್ಕೆ ಮೆಹಬೂಬಾ ಮುಫ್ತಿ ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಚಿಹ್ನೆ ಧ್ವಂಸ : ಒಮರ್ ಮಾತನ್ನೇ ಬೆಂಬಲಿಸಿ ವಕ್ಫ್ ಮಂಡಳಿ ವಿರುದ್ಧ ಕ್ರಮಕ್ಕೆ ಮೆಹಬೂಬಾ ಮುಫ್ತಿ ಆಗ್ರಹ

ಶ್ರೀನಗರ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಒಮರ್ ಅವರ ಮಾತನ್ನೇ ಅನುಸರಿಸಿ, ಕೆಲವು ದುರಹಂಕಾರಿಗಳ ವಿರುದ್ದ ನಮಗೆ ಕೋಪ ಬರುವುದು ಸಹಜ ಯಾಕಂದ್ರೆ ಭಾವನೆಗಳು ಉಕ್ಕಿ ಹರಿಯುತ್ತವೆ ಎಂದು ಹೇಳಿದ್ದಾರೆ. ನಾಮಫಲಕದ ಮೇಲೆ ದಾಳಿ ಮಾಡಿದವರು ರಾಷ್ಟೀಯ ಚಿಹ್ನೆಯನ್ನು ವಿರೋಧಿಸುವುದಿಲ್ಲ, ಆದ್ರೆ ಅದನ್ನು ತಮ್ಮ ಭಾವನೆಗಳಿಗೆ ಧಕ್ಕೆ ಬಂದ ಕಾರಣದಿಂದ ಧ್ವಂಸ ಮಾಡಿದ್ದಾರೆ ಎಂದಿದ್ದಾರೆ. ಜನರ ಭಾವನಗೆಗಳಿಗೆ ಧಕ್ಕೆ ತಂದವರನ್ನು ಬಂಧಿಸಬೇಕು, ವಕ್ಫ್ ಮಂಡಳಿಯ ವಿರುದ್ಧ, ಸೆಕ್ಷನ್ 295-ಎ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಘಟನೆಯ ಹಿನ್ನೆಲೆ

ಇತ್ತೀಚೆಗೆ ಹಜರತ್‌ಬಾಲ್ ದರ್ಗಾದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ವಕ್ಫ್ ಮಂಡಳಿಯ ಅಧ್ಯಕ್ಷೆ ದಾರಕ್ಷನ್ ಅಂದ್ರಾಬಿ ಅವರ ನೇತೃತ್ವದಲ್ಲಿ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ದರ್ಗಾದ ಒಳಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆಯೊಂದಿಗೆ ಸ್ಮಾರಕ ಫಲಕವನ್ನು ಸ್ಥಾಪಿಸಲಾಯಿತು.

ಆದರೆ, ಪ್ರಾಣಿಗಳ ಆಕೃತಿಗಳು ಇರುವ ಕಾರಣ ಇಸ್ಲಾಮಿಕ್ ಧರ್ಮಪ್ರಕಾರ ಅಸಂಗತವೆಂದು ಕೆಲವು ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದರು. ಆಕ್ರೋಶದ ನಡುವೆ ಫಲಕದ ಚಿಹ್ನೆಯನ್ನು ಒಡೆದು ಹಾಕುವ ಘಟನೆ ನಡೆದಿದೆ.

Edited By : Abhishek Kamoji
PublicNext

PublicNext

06/09/2025 10:06 pm

Cinque Terre

135.39 K

Cinque Terre

5

ಸಂಬಂಧಿತ ಸುದ್ದಿ