", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/286525-1757177228-WhatsApp-Image-2025-09-06-at-10.16.07-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿಯಲ್ಲಿ ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ನಗರದ ಹುತಾತ್ಮ ಚೌಕ್ ನಲ್ಲಿ ಅಧಿಕಾರಿ...Read more" } ", "keywords": "Belagavi Ganeshotsav, historic Ganesh festival, Ganesh Visarjan procession, Belagavi news, cultural event, traditional festival, Lord Ganesha immersion, Belagavi Ganesh Chaturthi celebration, festive atmosphere, community participation.", "url": "https://dashboard.publicnext.com/node" } ಬೆಳಗಾವಿ: ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಗೆ ವಿದ್ಯುಕ್ತ ಚಾಲನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಗೆ ವಿದ್ಯುಕ್ತ ಚಾಲನೆ

ಬೆಳಗಾವಿ: ಬೆಳಗಾವಿಯಲ್ಲಿ ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ನಗರದ ಹುತಾತ್ಮ ಚೌಕ್ ನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ವಾಮಿಜಿಗಳು ಹಾಗೂ ಮಹಾಮಂಡಳಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಗಣ್ಯರು ಚಾಲನೆ ನೀಡಿದರು. ಈ ವೇಳೆ ಶಾಸಕ‌ ಆಸೀಫ್ ಸೇಠ್, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ, ಮಾಜಿ ಶಾಸಕ‌ ಅನಿಲ ಬೆನಕೆ ಸೇರಿ ಮತ್ತಿತರರು ಇದ್ದರು.

ಮೆರವಣಿಗೆ ಮಾರ್ಗದಲ್ಲಿ ಡೋಲ್ ತಾಷಾ, ಜಾಂಝ್ ಪತಕ್, ಡೊಳ್ಳು ಪತಕ್ ಸೇರಿ ವಿವಿಧ ಸಾಂಪ್ರದಾಯಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಸದ್ಯಕ್ಕೆ ಕಪಿಲೇಶ್ವರ ಹೊಂಡದಲ್ಲಿ ಮನೆಗಳ ಗಣೇಶ ಮೂರ್ತಿ ವಿಸರ್ಜನೆ ಆಗುತ್ತಿವೆ. ಇದಾದ ಬಳಿಕ ಸಾರ್ವಜನಿಕ ಮೂರ್ತಿಗಳು ಬರಲಿವೆ. ಸ್ಥಳದಲ್ಲಿ 8 ಈಜುಪಟುಗಳನ್ನು ನಿಯೋಜಿಸಲಾಗಿದೆ. ದೊಡ್ಡ ಮೂರ್ತಿಗಳನ್ನು ನೀರಲ್ಲಿ ಮುಳುಗಿಸಲು ಕ್ರೇನ್ ಗಳನ್ನು ಬಳಕೆ ಮಾಡಲಾಗುತ್ತದೆ. ನಗರದ 8 ಕಡೆ ವಿಸರ್ಜನೆ ನಡೆಯುತ್ತಿದ್ದು, ಒಟ್ಟು 27 ಕ್ರೇನ್ ಗಳನ್ನು ಬಳಸಲಾಗಿತ್ತಿದೆ.

ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತೆ ಶುಭ ಅವರು, ಹೊಂಡದಲ್ಲಿ‌ ಚಿಕ್ಕ ಚಿಕ್ಕ ಮಕ್ಕಳನ್ನು ಬಿಡುತ್ತಿದ್ದಾರೆ. ಇದು ಸರಿಯಲ್ಲ. ಎಲ್ಲರೂ ಎಚ್ಚರಿಕೆ ವಹಿಸಬೇಕು. ಈಗಾಗಲೇ ಜಕ್ಕೇರಿ ಹೊಂಡದಲ್ಲಿ ಒಂದು ದುರಂತ ಸಂಭವಿಸಿದೆ. ಅದರ ಮಾಹಿತಿ ಈಗಷ್ಟೇ ತರಿಸಿಕೊಳ್ಳಬೇಕಿದೆ. 38 ಗಂಟೆವರೆಗೆ ವಿಸರ್ಜನಾ ಮೆರವಣಿಗೆ ನಡೆಯುವ ಸಾಧ್ಯತೆಯಿದೆ. ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಸಾರ್ವಜನಿಕರು ವಿಸರ್ಜನೆ ಬಳಿಕ ಸುರಕ್ಷಿತವಾಗಿ ಮನೆ ತಲುಪಬೇಕು ಎಂದರು.

Edited By : Shivu K
PublicNext

PublicNext

06/09/2025 10:17 pm

Cinque Terre

29.62 K

Cinque Terre

0

ಸಂಬಂಧಿತ ಸುದ್ದಿ