ಹಾವೇರಿ ನಗರದ ಏಲಕ್ಕಿ ಓಣಿಯ ಗಣಪತಿ ಸಮಿತಿ ರಕ್ತದಾನ ಶಿಬಿರ ಏರ್ಪಡಿಸಿತ್ತು. ಮುಂಜಾನೆಯಿಂದಲೇ ಆಗಮಿಸಿದ ನೂರಾರು ಯುವಕರು ರಕ್ತದಾನ ಮಾಡಿದರು.
ಈ ಸಮಿತಿ 11 ವರ್ಷದಿಂದ ಸಾರ್ವಜನಿಕ ಸ್ಥಳದಲ್ಲಿ ಶ್ರೀಗಣೇಶ ಪ್ರತಿಷ್ಠಾಪನೆ ಮಾಡುತ್ತಿದೆ. ಪ್ರತಿವರ್ಷ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿತ್ತು. ಆದರೆ, ಪ್ರಸ್ತುತ ವರ್ಷ ಪ್ರಥಮ ಬಾರಿಗೆ ರಕ್ತದಾನ ಶಿಬಿರ ಏರ್ಪಡಿಸಿತ್ತು.
ಮುಂಜಾನೆಯಿಂದಲೇ ಆರಂಭವಾದ ರಕ್ತದಾನ ಶಿಬಿರದಲ್ಲಿ ಸುಮಾರು 100ಕ್ಕೂ ಅಧಿಕ ಯುವಕರು ರಕ್ತದಾನ ಮಾಡಿದರು. ಗಜಾನನ ಸಮಿತಿಯ ಈ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಯಿತು.
PublicNext
06/09/2025 10:50 pm