ಹಾವೇರಿ: ಗಣೇಶನ ನಿಮಜ್ಜನಕ್ಕೆ ಡಿಜೆ ಬಳಸಿಕೊಂಡು ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಬದಲು, ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ನಾಗೇಂದ್ರನಮಟ್ಟಿ ಗಜಾನನ ಸಮಿತಿಯು ಭಕ್ತರಿಗೆ ವಿಶೇಷ ಹೋಳಿಗೆ ಊಟ ಏರ್ಪಡಿಸಿತು. ಸುಮಾರು 5,000ಕ್ಕೂ ಹೆಚ್ಚು ಭಕ್ತರಿಗೆ ಹೋಳಿಗೆ, ಚಿತ್ರಾನ್ನ, ಬದನೆಕಾಯಿ ಪಲ್ಯ ಮತ್ತು ಅನ್ನಸಾಂಬಾರು ಸೇರಿದಂತೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಹ ಪ್ರಸಾದ ಸೇವಿಸಿ ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಸಮಿತಿ ಸೋಮವಾರ (13ನೇ ದಿನ) ಗಣೇಶನ ನಿಮಜ್ಜನ ಮಾಡುವ ನಿರ್ಧಾರ ಕೈಗೊಂಡಿದೆ. ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾತಂಡಗಳನ್ನು ಆಹ್ವಾನಿಸಲಾಗಿದೆ.
Kshetra Samachara
07/09/2025 09:51 pm