ಹಾವೇರಿಯ ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿ ಗಣೇಶ ವಿಸರ್ಜನೆ ವಿಭಿನ್ನವಾಗಿ ಮಾಡುವ ಮೂಲಕ ಗಮನ ಸೆಳೆಯಿತು. ಗಣೇಶ ವಿಸರ್ಜನೆಗೆ ಸಮಿತಿ ಅರ್ಕೇಸ್ಟ್ರಾ, ಜಾಂಜ್ ಚಂಡೆ-ಮದ್ದಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿತು.
ಹಾವೇರಿ ಹುಕ್ಕೇರಿ ಮಠದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ 4 ಗಂಟೆಯಿಂದ ಆರಂಭವಾದ ಮೆರವಣಿಗೆ ರಾತ್ರಿ 10 ಗಂಟೆಯವರೆಗೆ ಸಾಗಿತು.
ಸನಾತನ ಧರ್ಮದಂತೆ ಬಿಳಿ ಬಟ್ಟೆಯ ಟೊಪ್ಪಿ ಧರಿಸಿ ಕೇಸರಿ ಶಾಲು ಹಾಕಿಕೊಳ್ಳುವ ಮೂಲಕ ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಮೆರವಣಿಗೆ ನಡೆಸಿ ನಂತರ ಗಣೇಶನ ವಿಸರ್ಜನೆ ಮಾಡಲಾಯಿತು.
PublicNext
08/09/2025 07:28 am