ಹಾನಗಲ್ : ಸದಾಶಿವ ಮಂಗಲಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಮಾತನಾಡಿದ ಅವರು. ಶಿಕ್ಷಕರು ಮೈಮರೆತರೆ ಸಮಾಜ ಅವನತಿಯ ಹಾದಿ ಹಿಡಿಯಲಿದೆ. ಹಾಗಾಗಿ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಲು ಶಿಕ್ಷಕರು ಈಗಲೇ ಉತ್ತಮ ಅಡಿಪಾಯ ಹಾಕಬೇಕಿದೆ. ಇಂದು ಶಿಕ್ಷಣ ವ್ಯವಸ್ಥೆ ಸವಾಲಿನಿಂದ ಕೂಡಿದ್ದು, ನಿತ್ಯವೂ ಸಾಕಷ್ಟು ಬಲಾವಣೆಗಳನ್ನು ಕಾಣುತ್ತಿದ್ದೇವೆ. ಶಿಕ್ಷಕರೂ ಸಹ ಬದಲಾವಣೆಯ ಭಾಗವಾಗಬೇಕಿದೆ,
ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಲಾಗುತ್ತಿದೆ. ಮಕ್ಕಳನ್ನು ತರಬೇತಿಗೊಳಿಸಿ ಸ್ಪರ್ಧಾತ್ಮಕ ಯುಗದ ಸ್ಪರ್ಧೆಗೆ ಸಜ್ಜುಗೊಳಿಸಲಾಗುತ್ತಿದೆ. ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿಯೂ ತಾಲೂಕಿನ ಸಾಧನೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದ್ದು, ಶಿಕ್ಷಕರು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಂಕಲ್ಪಿಸಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಮ್ಮ ವೃತ್ತಿಗೆ ಬೆಲೆ ಬರುವ ತೆರನಾಗಿ ನಮ್ಮ ಸೇವೆ ಇರಬೇಕು. ವೃತ್ತಿ, ಪ್ರವೃತ್ತಿಗಳು ಪರಿಶುದ್ಧ ಭಾವದಿಂದ ಕೂಡಿರಬೇಕು. ಗುರುವನ್ನು ಅತ್ಯಂತ ಎತ್ತರದಲ್ಲಿ ಗುರುತಿಸಿ, ಪೂಜಿಸುವ ಈ ಸಮಾಜಕ್ಕೆ ಗುರುಗಳು ಕೂಡ ಸಮಾಜದ ಋಣ ತೀರಿಸುವಂತಿರಬೇಕು ಎಂದು ನುಡಿದರು..
Kshetra Samachara
07/09/2025 06:26 pm