ಬೆಂಗಳೂರು: ಕಾರ್ ಸನ್ ರೂಫ್ ಓಪನ್ ಮಾಡಿ ನಿಲ್ತೀರಾ.? ಇಲ್ಲ ನೀವೂ ಸನ್ ರೂಫ್ ಇರೋ ಕಾರು ತಗೊಂಡು ಅದ್ರಲ್ಲಿ ನೀವೋ ನಿಮ್ಮ ಮಕ್ಕಳನ್ನು ನಿಲ್ಲಿಸಿ ಖುಷಿ ಪಡಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ. ಈ ಸ್ಟೋರಿ ನೋಡಿದ ಮೇಲೆ ಸನ್ ರೂಫ್ ಇರೋ ಕಾರು ಖರೀದಿ ಇರ್ಲಿ ಇರೋ ಕಾರನ್ನು ಮಾರಿ ಬಿಡ್ತಿರಾ.
ಹೌದು ಸನ್ ರೂಫ್ ನಲ್ಲಿ ನಿಂತು ಕಾರಿನಲ್ಲಿ ಪ್ರಯಾಣಿಸುವಾಗ ರಸ್ತೆ ಕಮಾನಿಗೆ ಬಾಲಕನ ತಲೆ ಹೊಡೆದು ಬಾಲಕನ ಸ್ಥಿತಿ ಗಂಭೀರವಾದ ಘಟನೆ ಶನಿವಾರ ವಿದ್ಯಾರಣ್ಯಪುರ ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ. ಹೈಟ್ ರಿಸ್ಟ್ರಿಕ್ಷನ್ ಗಾಗಿ ರೈಲ್ವೆ ಕಂಬಿಗಳನ್ನ ಅಳವಡಿಕೆ ಮಾಡಲಾಗಿತ್ತು. ಈ ವೇಳೆ ಕಾರು ಸನ್ ರೂಫ್ ಓಪನ್ ಮಾಡಿ ಬಾಲಜ ನಿಂತಿದ್ದ. ಇದನ್ನು ಗಮನಿಸದ ಕಾರು ಚಾಲಕ ಈ ಕಮಾನನ್ನ ಗಮನಿಸದೆ ಕಾರನ್ನ ಚಲಾಯಿಸಿದ್ದಾನೆ.
ಈ ವೇಳೆ ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕನಿಗೆ ಕಂಬಿ ತಗುಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಕಂಬಿ ತಗುಲಿ ಏಕಾಏಕಿ ಕಾರಿನ ಒಳಗೆ ಕುಸಿದು ಬಿದ್ದ ಬಾಲಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
07/09/2025 07:12 pm