", "articleSection": "Infrastructure,Business,Government", "image": { "@type": "ImageObject", "url": "https://prod.cdn.publicnext.com/s3fs-public/229640-1757311939-hbl.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ನಿತ್ಯ ವ್ಯಾಪಾರ ವಹಿವಾಟಿನ ಮೂಲಕ ಜನ ಜಂಗುಳಿಯಿಂದ ತುಂಬಿರುತಿದ್ದ ಹುಬ್ಬಳ್ಳಿಯ ಪ್ರತಿಷ್ಠಿತ ಮಹಾತ್ಮಾಗಾಂಧಿ ಮಾರ್ಕೆಟ್ ಇಂದು ಸ್ವಯ...Read more" } ", "keywords": "hubballi municipality rent hike protest, hubballi mg market closed, hubballi traders protest rent hike, hubballi market bandh news, hubballi municipal rent issue, mg market hubballi strike, hubballi business protest, hubballi shopkeepers oppose rent hike, hubballi market closure news, hubballi latest protest update", "url": "https://dashboard.publicnext.com/node" }
ಹುಬ್ಬಳ್ಳಿ : ನಿತ್ಯ ವ್ಯಾಪಾರ ವಹಿವಾಟಿನ ಮೂಲಕ ಜನ ಜಂಗುಳಿಯಿಂದ ತುಂಬಿರುತಿದ್ದ ಹುಬ್ಬಳ್ಳಿಯ ಪ್ರತಿಷ್ಠಿತ ಮಹಾತ್ಮಾಗಾಂಧಿ ಮಾರ್ಕೆಟ್ ಇಂದು ಸ್ವಯಂ ಪ್ರೇರಿತ ಬಂದ್ ಆಗಿದೆ.
ಹುಬ್ಬಳ್ಳಿ ಮಹಾನಗರ ಪಾಲಿಕೆ, ತಮ್ಮ ಒಡೆತನದ ಅಂಗಡಿಗಳ ಬಾಡಿಗೆಯನ್ನು 2 ರಿಂದ 3 ಪಟ್ಟು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಎಂ.ಜಿ.ಮಾರ್ಕೆಟ್ ವ್ಯಾಪಾರಸ್ಥರು ಇಂದು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ.
ಇಂದು ಬೆಳಂ ಬೆಳಿಗ್ಗೆ ಎಂ.ಜಿ.ಮಾರ್ಕೆಟ್ ಅಂಗಡಿಗಳನ್ನು ಬಂದ್ ಮಾಡಿದ ವ್ಯಾಪಾರಸ್ಥರು, ಎಂ.ಜಿ.ಮಾರ್ಕೆಟ್ ಹಾಗೂ ದುರ್ಗದಬೈಲ್ ಮಾರ್ಗವಾಗಿ ಪ್ರತಿಭಟನೆ ಮೆರವಣಿಗೆ ಮೂಲಕ ಹುಬ್ಬಳ್ಳಿ ಪಾಲಿಕೆ ಕಚೇರಿ ತಲುಪಿ ಅಂಗಡಿಗಳ ಬಾಡಿಗೆ ಇಳಿಕೆ ಮಾಡುವಂತೆ ಮನವಿ ಮಾಡಲಿದ್ದಾರೆ.
ಸದ್ಯ ನೂರಾರು ಸಂಖ್ಯೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ವ್ಯಾಪಾರಸ್ಥರು, ಪ್ರತಿಭಟನೆ ಮೂಲಕ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹ ಪಡಿಸಿದ್ದಾರೆ.
ಶ್ರೀಧರ ಪೂಜಾರ ಮತ್ತು ಗಜಾನನ ಹೂಗಾರ ಪಬ್ಲಿಕ್ ನೆಕ್ಸ್ಟ್
Kshetra Samachara
08/09/2025 11:42 am