ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿ -948ನಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಅವೈಜ್ಞಾನಿಕ ರಸ್ತೆಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಸೋಮವಾರ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಗಾಳಿಪುರ ಬಡಾವಣೆ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -948ರ ಬೈಪಾಸ್ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು 

ಈ ಅವಜ್ಞಾನಿಕ ಬೈಪಾಸ್ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸಿ ಪ್ರಯಾಣಿಕರು ಹಾಗೂ ಸವಾರರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 6ರ ಶನಿವಾರ ಇದೆ ಅವೈಜ್ಞಾನಿಕ ರಸ್ತೆಯಲ್ಲಿ ಮೂರು ಜನ ಬೈಕ್ ಸವಾರರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರವೇ ಮುಖ್ಯ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದರು.

ರಾಷ್ಟ್ರೀಯ ಹೆದ್ದಾರಿ-948ಗೆ ಗಾಳೀಪುರದ ಮೂಲಕ ಹಾದು ಹೋಗಿ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಲ್ಲಿ ಯಾವುದೇ ಸೂಚನಾ ಫಲಕವಾಗಲಿ ಅಥವಾ ಅಂಡರ್ ಪಾಸ್ ಡಿವೈಡರ್ ಆಗಲಿ ಅಥವಾ ವಿದ್ಯುತ್ ದೀಪಗಳಾಗಲಿ ಇರುವುದಿಲ್ಲ. ಸತ್ಯಮಂಗಲ ಕಡೆಯಿಂದ ಬರುವ, ಚಾಮರಾಜನಗರದ ಸೋಮವಾರ ಪೇಟೆ ಮೂಲಕ ಹಾದು ಹೋಗಿರುವ ಹೆದ್ದಾರಿಯಲ್ಲಿ ಸತ್ಯಮಂಗಲದ ಕಡೆಗೆ ಸಂಚರಿಸುವ ಹಾಗೂ ಬೈಪಾಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸೂಚನೆ ನೀಡುವ ನಾಮಫಲಕಗಳಾಗಿ ಅಥವಾ ಡಿವೈಡರ್ ಇಲ್ಲದಿರುವುದರಿಂದ ಸತ್ಯಂಮಗಲದ ಕಡೆಯಿಂದ ಬರುವ ವಾಹನಗಳು ಯಾವ ಕಡೆಗೆ ಹೋಗಬೇಕು ಎಂದು ಗಲಿಬಿಲಿಯಾಗಿ ಅಪಘಾತಗಳು ಸಂಭವಿಸುತ್ತಿವೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಅವೈಜ್ಞಾನಿಕ ಬೈಪಾಸ್ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸಿ, ವಾಹನ ಸವಾರರು ಹಾಗೂ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳು ತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ದಾರಿ ಪ್ರಾಧಿಕಾರ ಕೂಡಲೇ ಈ ರಸ್ತೆಗೆ ಅಂಡರ್ ಪಾಸ್ ಡಿವೈಡರ್ ಹಾಗೂ ವಿದ್ಯುತ್ ದೀಪ ಹಾಗೂ ಸೂಚನಾ ಫಲಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Edited By : PublicNext Desk
PublicNext

PublicNext

08/09/2025 01:07 pm

Cinque Terre

14.03 K

Cinque Terre

0

ಸಂಬಂಧಿತ ಸುದ್ದಿ