", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/39640520250908065148filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಬಂದೂಕಿನ ಲೆಸೆನ್ಸ್ ನೀಡುವುದು ಜೀವ ರಕ್ಷಣೆಯ ಉದ್ದೇಶಕ್ಕಾಗಿ, ವಿವೇಕ ರಹಿತವಾಗಿ ಬಳಸಲು ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗು...Read more" } ", "keywords": ""Benefits of having a gun license for self-defense in Chamarajanagar"", "url": "https://dashboard.publicnext.com/node" }
ಚಾಮರಾಜನಗರ : ಬಂದೂಕಿನ ಲೆಸೆನ್ಸ್ ನೀಡುವುದು ಜೀವ ರಕ್ಷಣೆಯ ಉದ್ದೇಶಕ್ಕಾಗಿ, ವಿವೇಕ ರಹಿತವಾಗಿ ಬಳಸಲು ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ಹೇಳಿದರು.
ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಸಭಾಂಗಣ ದಲ್ಲಿ ಸೆ.8 ರಿಂದ 14 ರವರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರ-2025 ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ನಾಗರಿಕ ಬಂದೂಕು ತರಬೇತಿ ಶಿಬಿರ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಏಕೆಂದರೆ ಯಾವುದೇ ಬಂದೂಕಿಗೆ ಲೈಸೆನ್ಸ್ ಪಡೆಯಬೇಕೆಂದರೆ ತರಬೇತಿ ಅವಶ್ಯಕತೆ ಇರಲಿದೆ. ಹಾಗಾಗಿ ಪೊಲೀಸ್ ಇಲಾಖೆ ತರಬೇತಿ ನೀಡುತ್ತಿದೆ. ಕೊಳ್ಳೇಗಾಲ ಉಪ ವಿಭಾಗದಲ್ಲಿ ಐದನೇ ಶಿಬಿರವನ್ನು ಆಯೋಜಿಸಲಾಗಿದೆ. ಈ ಬಾರಿ 80 ಜನರು ಅರ್ಜಿ ಸಲ್ಲಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಿಬಿರಾರ್ಥಿಗಳು ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಬಂದೂಕು ಬಳಕೆಗೆ ಲೆಸೆನ್ಸ್ ಕಡ್ಡಾಯವಾಗಿರುತ್ತದೆ. ಸ್ವ ರಕ್ಷಣೆ ಮತ್ತು ಜಮೀನು ಕಾವಲಿಗೆ ಬಂದೂಕು ಪಡೆದವರು ಜವಬ್ದಾರಿಯುತವಾಗಿ ನಿಭಾಯಿಸಬೇಕಿರುತ್ತದೆ. ಹಾಗಾಗಿ ತರಬೇತಿಯಲ್ಲಿ ಶ್ರದ್ದೆಯಿಂದ ಪಾಲ್ಗೊಳ್ಳಿ ಎಂದರು.
Kshetra Samachara
08/09/2025 06:51 pm