", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1757331264-sne.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಅವ್ರೆಲ್ಲ ಒಟ್ಟಿಗೆ ಬೆಳೆದವರು, ಅಣ್ಣ ತಮ್ಮನಿಗಿಂತ ಆತ್ಮೀಯವಾಗಿದ್ರು. ಆದ್ರೆ ಅವರ ಮಧ್ಯದಲ್ಲಿ ಹುಡುಗಿಯ ವಿಚಾರವಾಗಿ ಜಗಳವಾಗಿತ್ತು. ...Read more" } ", "keywords": "Bengaluru murder case, lover's dispute, murder plot, Bengaluru crime news, sketch artist murder, love affair gone wrong, Bengaluru police investigation.", "url": "https://dashboard.publicnext.com/node" }
ಬೆಂಗಳೂರು: ಅವ್ರೆಲ್ಲ ಒಟ್ಟಿಗೆ ಬೆಳೆದವರು, ಅಣ್ಣ ತಮ್ಮನಿಗಿಂತ ಆತ್ಮೀಯವಾಗಿದ್ರು. ಆದ್ರೆ ಅವರ ಮಧ್ಯದಲ್ಲಿ ಹುಡುಗಿಯ ವಿಚಾರವಾಗಿ ಜಗಳವಾಗಿತ್ತು. ಸ್ನೇಹಿತನ ಲವರ್ಗೆ ಕಾಲ್ ಮಾಡ್ಬೇಡ ಅಂತ ಹೇಳಿದ್ದಷ್ಟೆ. ಅಷ್ಟಕ್ಕೇ ಕೋಪಗೊಂಡಿದ್ದ ಗೆಳೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಆದ್ರೆ ಕೊಲೆ ಮಾಡಲು ಬಂದವನೇ ಕೊಲೆಯಾಗಿದ್ದ.
ಈ ಫೋಟೋ ದಲ್ಲಿರುವ ಈತನ ಹೆಸ್ರು ಪ್ರತಾಪ್ ಅಂತ ಮೂಲತಃ ಚಿತ್ರದುರ್ಗದವನು. ಹೀಗೆ ಭೀಕರವಾಗಿ ಸತ್ತು ಮಲಗಿರುವನ ಹೆಸ್ರು ಇಸ್ಮಾಯಿಲ್. ಈ ಪ್ರತಾಪ್ , ಪುನೀತ್ ಹಾಗೂ ಇಸ್ಮಾಯಿಲ್ ಕುಚುಕು ಗೆಳೆಯರು. ಇಬ್ಬರು ಒಟ್ಟಿಗೆ ಒಂದೇ ಪಿಜಿಯಲ್ಲಿ ವಾಸವಾಗಿದ್ರು. ಇತ್ತೀಚಿಗೆ ಪುನೀತ್ ಬಿಜಾಪುರದಿಂದ ಇಸ್ಮಾಯಿಲ್ ನನ್ನ ಬೆಂಗಳೂರಿಗೆ ಕರೆತಂದಿದ್ದ. ಈ ಇಸ್ಮಾಯಿಲ್ ಆಟೋ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ. ಇನ್ನು ಪುನೀತನ ಗರ್ಲ್ ಫ್ರೆಂಡ್ ಜೊತೆ ಇಸ್ಮಾಯಿಲ್ ಪದೇ ಪದೇ ಫೋನಿನಲ್ಲಿ ಮಾತಾಡ್ತಿದ್ದ.
ಇದರಿಂದ ಪ್ರತಾಪ ಕೋಪಗೊಂಡು ತನ್ನ ಸ್ನೇಹಿತನಾದ ಪುನೀತ್ ಗರ್ಲ್ ಫ್ರೆಂಡ್ ಗೆ ನೀನ್ಯಾಕೆ ಕಾಲ್ ಮಾಡ್ತೀಯ ಅಂತ ಇಸ್ಮಾಯಿಲ್ ಗೆ ಅವಾಜ್ ಬಿಟ್ಟಿದ್ದ. ಇಷ್ಟಕ್ಕೇ ಕುಪಿತಗೊಂಡಿದ್ದ ಇಸ್ಮಾಯಿಲ್ ಪ್ರತಾಪ್ ನ ಮುಗಿಸಲೇಬೇಕು ಅಂತ ಕೊಲೆಗೆ ಸ್ಕೆಚ್ ಹಾಕಿ ಪಕ್ಕಾ ಪ್ಲ್ಯಾನ್ ಮಾಡಿದ್ದ.
ಹೀಗೆ ಸ್ಕೆಚ್ ಹಾಕಿದ್ದ ಇಸ್ಮಾಯಿಲ್ ಸಮಯಕ್ಕಾಗಿ ಕಾದಿದ್ದ. ಆದ್ರೆ, ಆ ವಿಧಿಯ ಆಟವೇ ಬೇರೆನೇ ಆಗಿತ್ತು. ಮೊನ್ನೆ ತಡರಾತ್ರಿ ಪುನೀತ ಹಾಗೂ ಪ್ರತಾಪ ಮಹದೇವಪುರದ ದೊಡ್ಡನೆಕ್ಕುಂದಿ ರೈಲ್ವೇ ಟ್ರ್ಯಾಕ್ ಬಳಿ ಎಣ್ಣೆ ಕುಡೀತಾ ಕೂತಿದ್ದರು. ಈ ವೇಳೆ ಇಸ್ಮಾಯಿಲ್ ಅಲ್ಲಿಗೆ ಬಂದು ಗಲಾಟೆ ಶುರು ಮಾಡಿದ್ದ. ಮೂವರ ನಡುವೆ ಜೋರಾಗೇ ಹೊಡೆದಾಟ ಆಗಿದೆ. ಇನ್ನು ಟ್ರ್ಯಾಕ್ ಮೇಲೆ ರೈಲು ಬರುವ ಹೊತ್ತಿಗೆ ಇಸ್ಮಾಯಿಲ್ ಪ್ರತಾಪನನ್ನ ರೈಲಿನತ್ತ ತಳ್ಳೋಕೆ ಬಂದಿದ್ದ. ಆದ್ರೆ, ಪ್ರತಾಪ ತಪ್ಪಿಸಿಕೊಂಡು ಇಸ್ಮಾಯಿಲ್ ನನ್ನ ರೈಲಿನತ್ತ ತಳ್ಳಿದ್ದು,, ಕೊಲೆ ಮಾಡಲು ಬಂದವನೇ ಕೊಲೆಯಾಗಿ ಹೋಗಿದ್ದ. ಅದಾದ ಬಳಿಕ ಪ್ರತಾಪ ಇಸ್ಮಾಯಿಲ್ ಶವವನ್ನ ಟ್ರ್ಯಾಕ್ ಗೆ ಎಸೆದಿದ್ದ. ರೀಲ್ಸ್ ಮಾಡೋಕೆ ಹೋಗಿ ಇಸ್ಮಾಯಿಲ್ ಪ್ರಾಣ ಕಳ್ಕೊಂಡ ಅಂತ ಕಥೆ ಹೆಣೀಬೇಕು ಅಂತ ಪ್ಲಾನ್ ಮಾಡಿದ್ದರು. ಅಷ್ಟರಲ್ಲೇ ಪೊಲೀಸರು ಆರೋಪಿ ಪುನೀತ್ ನ ಬಂಧಿಸಿದ್ದು, ಪ್ರಮುಖ ಆರೋಪಿ ಪ್ರತಾಪ್ ಪರಾರಿಯಾಗಿದ್ದಾನೆ.
ಸದ್ಯ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು. ಪರಾರಿಯಾಗಿರುವ ಪ್ರತಾಪನ ಹುಡುಕಾಟ ನಡೆಸ್ತಿದ್ದಾರೆ.
PublicNext
08/09/2025 05:04 pm