", "articleSection": "Crime,Law and Order,Government,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757331703-011~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಪೊಲೀಸರಿಂದ ನಡೆದ ಲಘು ಲಾಠಿ ಪ್ರಹಾರ ನಡೆದಿರುವ...Read more" } ", "keywords": "Dharwad,BJP demands,CPI Kamatagi,Police Constable Syed,suspension deadline,political pressure,local news,Karnataka,police suspension", "url": "https://dashboard.publicnext.com/node" } ಧಾರವಾಡ: ನರೇಂದ್ರ ಗ್ರಾಮದಲ್ಲಿ ಲಾಠಿ ಪ್ರಹಾರ: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನರೇಂದ್ರ ಗ್ರಾಮದಲ್ಲಿ ಲಾಠಿ ಪ್ರಹಾರ: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಪೊಲೀಸರಿಂದ ನಡೆದ ಲಘು ಲಾಠಿ ಪ್ರಹಾರ ನಡೆದಿರುವುದನ್ನು ಖಂಡಿಸಿ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಧಾರವಾಡದ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹಿಂದೂ ಸಮಾಜದವರ ಮೇಲೆ ಪೊಲೀಸರು ಕ್ಷುಲ್ಲಕ ಕಾರಣಕ್ಕಾಗಿ ಲಾಠಿ ಪ್ರಹಾರ ನಡೆಸಿದ್ದಾರೆ. ಡಿಜೆ ಹಚ್ಚಿದಾಗ ಯಾವುದೇ ಗಲಾಟೆ ನಡೆಯದೇ ಇದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

ಈ ಕೂಡಲೇ ನರೇಂದ್ರ ಗ್ರಾಮದ ಬೀಟ್ ಪೊಲೀಸ್ ಸಿಬ್ಬಂದಿಯಾದ ಸೈಯದ್ ಹಾಗೂ ಇನ್‌ಸ್ಪೆಕ್ಟರ್ ಎಸ್.ಎಸ್.ಕಮತಗಿ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Edited By : Suman K
Kshetra Samachara

Kshetra Samachara

08/09/2025 05:11 pm

Cinque Terre

11.83 K

Cinque Terre

3

ಸಂಬಂಧಿತ ಸುದ್ದಿ