Public Next Exclusive....
ಹುಬ್ಬಳ್ಳಿ: ಡಿಜೆ ಹಚ್ಚಿದ್ದಕ್ಕೆ ದ್ವೇಷ ಸಾಧಿಸಿ ಅನ್ಯಕೋಮಿನ ಯುವಕರಿಂದ ಭಿಮರಾಜ ಎಂಬ ಯುವಕನ ಹೊಟ್ಟೆಗೆ ಚಾಕು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹೌದು. ದೇವಾಂಗಪೇಟೆಯ ಭೀಮರಾಜ್ ನರಿಯವರ ಚಾಕು ಇರಿತಕ್ಕೆ ಒಳಗಾದ ಯುವಕ. ಮೊನ್ನೆ ರಾತ್ರಿ ಗಣಪತಿ ವಿಸರ್ಜನೆಯ ವೇಳೆ ಡಿಜೆ ಬಂದ್ ಮಾಡುವಂತೆ ಗಣೇಶ ಮಂಡಳಿಯ ಯುವಕರಿಗೆ ಅನ್ಯಕೋಮಿ ಯುವಕರು ಅವಾಜ್ ಹಾಕಿದ್ದರಂತೆ. ಆಗ ಯುವಕ ಮಂಡಳಿ ಮತ್ತು ಅನ್ಯಕೋಮಿನ ಯುವಕರ ನಡುವೆ ವಾಗ್ವಾದ ನಡೆದಿದೆ. ಅದೇ ದ್ವೇಷ ಸಾಧಿಸಿ ನಿನ್ನೆ ರಾತ್ರಿ ಬಂದು ಡಿಜೆ ಯಾಕೆ ಹಾಕಿದ್ದೀರಿ ಎಂದು ಭೀಮರಾಜಗೆ ಅನ್ಯಕೋಮಿನ ದೇವಾಂಗಪೇಟೆಯ ಚಮನ್ ಉಣಕಲ್ ಹಾಗೂ ಯೂನಸ್ ಅಲಿಯಾಸ್ ಬಗ್ಗ ಚಾಕು ಇರಿದಿದ್ದಾರೆ ಎಂದು ಭೀಮರಾಜ ಪೋಷಕರು ಆರೋಪಿಸಿದ್ದಾರೆ.
ಇನ್ನು ಈ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 9.30 ಸುಮಾರಿಗೆ ದೇವಾಂಗಪೇಟೆಯಲ್ಲಿ ಘಟನೆ ನಡೆದಿದೆ. ಎಲ್ಲ ಹಿಂದೂ ಮುಸ್ಲಿಂ ಹಿರಿಯರು ನಾವೇಲ್ಲರೂ ಒಂದೇ ಎಂಬ ಭಾವವದಿಂದ ಹಬ್ಬಗಳಲ್ಲಿ ಭಾಗಿಯಾಗಿ ಶಾಂತಿ ಸೌಹಾರ್ದತೆ ಸಾರುತ್ತಿದ್ದಾರೆ. ಅಂತರದಲ್ಲಿ ಕೆಲವೊಂದಿಷ್ಟು ಪುಡಾರಿಗಳು ಶಾಂತಿ ಭಂಗ ಮಾಡುತ್ತಿದ್ದಾರೆ. ಪೊಲೀಸರು ಇಂತವರ ಮೇಲೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2025 10:43 am